ಬಡಗನ್ನೂರು: ಇತಿಹಾಸ ಪ್ರಸಿದ್ಧ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮುಂದಿನ ಮೂರು ವರ್ಷಗಳ ಅವಧಿಗೆ ಪುತ್ತೂರು ಶಾಸಕ ಅಶೋಕ್ ರೖೆ ಶಿಫಾರಸ್ಸಿನಲ್ಲಿ ನೂತನ ಸದಸ್ಯರನ್ನು ನೇಮಕಗೊಳಿಸಿದೆ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕಾರ್ಯದರ್ಶಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಆದೇಶಿಸಿದ್ದು, ಸಮಿತಿ ರಚನಾ ಸಭೆಯನ್ನು ಏ.1ರಂದು ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ಸತೀಶ್ ರೖೆ ಕಟ್ಟಾವು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸದಸ್ಯ ಜನಾರ್ದನ ಪೂಜಾರಿ ಪದಡ್ಕ ಸೂಚಿಸಿ, ಶ್ರೀಮತಿ ಕನ್ನಡ್ಕ ಅನುಮೋದಿಸಿದರು.
ಸದಸ್ಯರಾಗಿ ಜನಾರ್ದನ ಪೂಜಾರಿ ಪದಡ್ಕ, ಪುರಂದರ ರೖೆ ಕುದ್ಕಾಡಿ, ಶ್ರೀನಿವಾಸ ಗೌಡ ಕನ್ನಯ, ಉದಯ ಕುಮಾರ್ ಪಡುಮಲೆ, ಶಂಕರಿ ನಾರಾಯಣ ಪಾಟಾಳಿ ಪಟ್ಟೆ, ಶ್ರೀಮತಿ ಕನ್ನಡ್ಕ, ಗೋಪಾಲ ನಾಯ್ಕ ದೊಡ್ಡಡ್ಕ, ಪ್ರಧಾನ ಅರ್ಚಕ ಮಹಾಲಿಂಗ ಭಟ್ ಬಿ ಆಯ್ಕೆಯಾದರು.
ದೇವರ ಕೆಲಸ ಮಾಡುವ ಸೌಭಾಗ್ಯ ದೊರಕಿದೆ
ಸಮಿತಿಯ 9 ಜನ ಸದಸ್ಯರು ತಮ್ಮ ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ಮುಕ್ತವಾಗಿ ಹಂಚಿ ಕೊಂಡು ಪರಸ್ಪರ ಚರ್ಚಿಸಿ ಒಟ್ಟಾಗಿ ಕೆಲಸ ಮಾಡುವ ಜತೆಗೆ ಈ ಹಿಂದಿನ ವ್ವವಸ್ಥಾಪನಾ ಸಮಿತಿ ಹಾಗೂ ಜಿರ್ನೋದ್ಧಾರ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರುಗಳ ಸಲಹೆ ಸೂಚನೆಗಳನ್ನು ಪಡೆದು ಊರಿನ ಊರಿನ ಜನರ ವಿಶ್ವಾಸ ಮತ್ತು ಸಹಕಾರದಲ್ಲಿ ದೇವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಶ್ರೀ ದೇವರು ಅನುಗ್ರಹಿಸಲಿ

ಅಧ್ಯಕ್ಷರು ವ್ವವಸ್ಥಾಪನಾ ಸಮಿತಿ ಶ್ರೀ ಕ್ಷೇತ್ರ ಪಡುಮಲೆ