ಪುತ್ತೂರು: 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯೂರಿನಿಂದ ಹಾಜರಾದ 82 ವಿದ್ಯಾರ್ಥಿಗಳ ಪೈಕಿ 74 ವಿದ್ಯಾರ್ಥಿಗಳು ಉತ್ತೀರ್ಣರಾಗಿ 90.24 ಶೇಕಡಾ ಫಲಿತಾಂಶ ದಾಖಲಾಗಿದೆ. 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 38 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 21 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿದ್ದಾರೆ. ಏಳು ಜನ ವಿದ್ಯಾರ್ಥಿಗಳಿಗೆ ಎ ಪ್ಲಸ್ ಗ್ರೇಡ್ ಲಭಿಸಿದೆ. ಅಸ್ಮಿತಾ. ಎಸ್ 609 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಹಾಗೂ ಸ್ಮಿತಾ ಯು 604 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ರಾಯಲ್ ಡಿಸೋಜಾ -593, ಮುಹಮ್ಮದ್ ಅನ್ಸಾರ್ ಕೆ.ಎ – 590 ಫಾತಿಮತ್ ಶಮ್ನ – 576 ತೇಜಸ್- 571, ಫಾತಿಮತ್ ಸಿಫಾ- 571, ಯಕ್ಷಿತಾ – 558, ಅಫ್ರೀನ – 546, ಸಾನ್ವಿ ಡಿ.ಪಿ- 541 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಗೆ ಅರ್ಹರಾಗಿದ್ದಾರೆ ಎಂದು ಶಾಲೆಯ ಉಪಪ್ರಾಂಶುಪಾಲರಾದ ವಿನೋದ್ ಕುಮಾರ್ ಕೆಎಸ್ ತಿಳಿಸಿದ್ದಾರೆ.