ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲೆಗೆ ಶೇ.98.18 ಫಲಿತಾಂಶ

0

ಪುತ್ತೂರು: 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಢ ಶಾಲೆಯು ಶೇ.98.18 ಫಲಿತಾಂಶವನ್ನು ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 55 ವಿದ್ಯಾರ್ಥಿಗಳಲ್ಲಿ 54 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 17 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 31 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಒಬ್ಬ ವಿದ್ಯಾರ್ಥಿಯು ಅನುತ್ತೀರ್ಣಗೊಂಡಿರುತ್ತಾನೆ.


ಯಶ್ವೀನ್ ಆಳ್ವ 603 (ಶ್ರೀಧರ್ ಆಳ್ವಾ ಹಾಗೂ ದುರ್ಗಾಂಬಿಕಾ ರೈ ಬಿ ದಂಪತಿ ಪುತ್ರ), ಯಶ್ವಿತ್ ಆಳ್ವ 597 (ಶ್ರೀಧರ್ ಆಳ್ವ ಹಾಗೂ ದುರ್ಗಾಂಬಿಕ ರೈಬಿ ದಂಪತಿ ಪುತ್ರ), ರಾಧಿಕಾ ಡಿ 595 (ಮಾಹಾಲಿಂಗ ನಾಯಕ ವಿಮಲಾ ದಂಪತಿ ಪುತ್ರಿ), ಎ.ಕೆ ಫಾತಿಮಾತ್ ತಬ್ ಶಿರಾ 588, ಸನ್ಮಿತ 581, ಶರಣ್ಯ 580, ಹರ್ಷಿಣಿ 573, ಪೂರ್ಣಶ್ ಎಂ 572, ಮಯೂರ್ ಎಸ್ 570, ಅಶ್ವಿನಿ 565, ಮಸ್ನ ಫಾತಿಮಾ ಎಂ ಪಿ 561, ಸ್ಮಿತಾ 558, ಆಯುಷತ್ ನುಸ್ರೀನಾ 554, ಪೃಥ್ವಿ 551, ಸಮೀಕ್ಷಾ ಎಂ 548, ಜೀವನ ಕುಮಾರ್ 541, ವಿಜಿನ 532 ಅಂಕಗಳನ್ನು ಪಡೆದುಕೊಂಡು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಅಸ್ಮಿತ್ 530, ಜನನಿ 518, ಬಬಿತ 513, ಫಾತಿಮಾ ಅಸ್ನ 508, ದಿವ್ಯಶ್ರೀ 507, ಅಕ್ಷಯ ಕುಮಾರ್ 503 ಅಂಕಗಳನ್ನು ಪಡೆದುಕೊಂಡಿರುತ್ತಾರೆ ಎಂದು ಮುಖ್ಯ ಗುರು ಅನ್ನಮ್ಮ ಪಿ.ಎಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here