ಮೇನಾಲ ಒಕ್ಕೂಟದ ಮಾಸಿಕ, ಮಾಸಸನ ವಿತರಣೆ

0

ಬಡಗನ್ನೂರು: ಮೇನಾಲ ಒಕ್ಕೂಟದ ಮಾಸಿಕ ಸಭೆಯು ಏ.27 ರಂದು ಮೇನಾಲ ಹಿ. ಪ್ರಾ. ಶಾಲೆಯಲ್ಲಿ ನಡೆಯಿತು.

ಸೇವಾಪ್ರತಿನಿಧಿ ಸುಂದರ್ ಜಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ಒಕ್ಕೂಟದಲ್ಲಿ 2025 -26 ನೇ ಸಾಲಿಗೆ ನೋಂದಾವಣೆ ಮಾಡಿಕೊಂಡ ಸಂಪೂರ್ಣ ಸುರಕ್ಷಾ / ಆರೋಗ್ಯ ರಕ್ಷಾ ಕಾರ್ಯಕ್ರಮಗಳ ಬಗ್ಗೆ,ಹಾಗೂ ಮುಂದೆ ಪ್ರಗತಿ ನಿಧಿ ಸಾಲ ಪಡೆದುಕೊಳ್ಳಲು ಬೇಕಾದ ನಿಯಮಗಳು ಮತ್ತು ಇದುವರೆಗೆ ಇದ್ದ ಬಡ್ಡಿ 13.5 % ಕಡಿತ ದರವನ್ನು ಮೇ 01/ 2025 ರಿಂದ ಪಡೆಯುವ ಎಲ್ಲಾ ಸಾಲಗಳಿಗೆ 14.5% ಕಡಿತ ದರಕ್ಕೆ ಬ್ಯಾಂಕ್ ನ ನಿಯಮದಂತೆ ಏರಿಸಲಾಗಿದೆ. ಆದರೆ ಈ ಮೊದಲು ಪಡೆದುಕೊಂಡ ಎಲ್ಲಾ ಸಾಲಗಳಿಗೆ ಅದು ಮುಗಿಯುವ ತನಕ ಹಿಂದಿನ 13.5% ಕಡಿತ ದರವೇ ಮುಂದುವರಿಯಲಿದೆ ಎಂದರು.

ಮಾಸಸನ ಹೆಚ್ಚಳ
ಮೇ 2025 ರಿಂದ ಏಪ್ರಿಲ್ 2026 ರ ತನಕ ಪ್ರತೀ ತಿಂಗಳು ರೂ 1000 ಮಾಸಸನ ಸಿಗಲಿದೆ. ಈಗಾಗಲೇ ನಮ್ಮ ಒಕ್ಕೂಟದ ಸದಸ್ಯರಾದ ತಂಗುಣಿ ಯವರು ಮಾಸಸನ ಪಡೆಯುತಿದ್ದಾರೆ. ಅಲ್ಲದೆ ಒಕ್ಕೂಟದ ಸದಸ್ಯರ ಸುಮಾರು 5 ಮಂದಿ 2024 ರಿಂದ ತಿಂಗಳಿಗೆ ರೂ 700 ರಿಂದ 1000 / ವರೆಗೆ ಶಿಷ್ಯವೇತನ ಪಡೆಯುತಿದ್ದಾರೆ ಮತ್ತು ಇದೇ ಶಾಲೆಗೆ 10 ಬೆಂಚು ಡೆಸ್ಕ್ ಗಳನ್ನು ಈ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ನೀಡಲಾಗಿದೆ. ಹೀಗೆ ಹತ್ತು ಹಲವು ಕಾರ್ಯಕ್ರಮ ಗಳನ್ನು ಬಡವರಿಗಾಗಿ ನೀಡುತ್ತಾ ಬರುತ್ತಿದ್ದಾರೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷೆ ಗೀತಾ, ಕಾರ್ಯದರ್ಶಿ ಶೀನ ಎಸ್ , ಉಪಾಧ್ಯಕ್ಷೆ ಸರಸ್ವತಿ , ಜೊತೆ ಕಾರ್ಯದರ್ಶಿ ಅಕ್ಷತಾ ಎಂ, ಕೋಶಾಧಿಕಾರಿ ಗಿರೀಶ್, ನಳಿನಿ ಉಪಸ್ಥಿತರಿದ್ದರು.

ಸೌರ್ಧ ಸಂಘದ ಗುಲಾಬಿ ಕುದ್ರೋಳಿಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡಮಾಡಿದ ನಿರ್ಗತಿಕರ ಮಾಶಾಸನದ ಮಂಜೂರಾತಿ ಪತ್ರವನ್ನು ಒಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here