ಪುತ್ತೂರು: ನೇರಳಕಟ್ಟೆ ಆರ್ಯಾಪು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕ ಮಾರಿಪೂಜೆಯು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ನಾಗೇಶ್ ತಂತ್ರಿ ಕೆಮ್ಮಿಂಜೆರವರ ನೇತೃತ್ವದಲ್ಲಿ ಎ.26-27ರಂದು ಜರಗಿತು.
ಎ.26ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಪಂಚಗವ್ಯ ಪುಣ್ಯಹವಾಚನ ಶುದ್ಧಿ, ಶ್ರೀ ಗಣಪತಿ ಹೋಮ, ಕಲಶ ಪೂಜೆ ಹಾಗೂ ದೈವಗಳಿಗೆ ತಂಬಿಲ, ಮಧ್ಯಾಹ್ನ ಶ್ರೀ ಅಮ್ಮನವರಿಗೆ ಗುಡಾನ್ನ ಮತ್ತು ಹಾಲು ಪಾಯಸ ಸಮರ್ಪಣೆ ನಂತರ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ‘ಅಮ್ಮನ ಪ್ರಸಾದ’ ನಡೆಯಲಿದೆ.
ಸಂಜೆ ಶ್ರೀ ಕಲ್ಲುರ್ಟಿ ದೈವದ ಅಭಯ ಸ್ವೀಕಾರ, ರಾತ್ರಿ ಶ್ರೀ ಅಮ್ಮನವರಿಗೆ ಮಹಾಪೂಜೆ, ಕ್ಷೇತ್ರದ ಇತರ ದೈವಗಳಿಗೆ ಪೂಜೆ, ಶ್ರೀ ಅಮ್ಮನವರಿಂದ ಹಾಗೂ ಸ-ಪರಿವಾರ ದೈವಗಳಿಂದ ಆಭಯ ಸ್ವೀಕಾರ, ಶ್ರೀ ಅಮ್ಮನವರ ಭಂಡಾರ ತೆಗೆಯುವುದು, ಉತ್ಸವ ಬಯಲು ‘ಆರ್ಯಾಪು ನೇರಳಕಟ್ಟೆ’ ಮೂಲ ಕ್ಷೇತ್ರಕ್ಕೆ ಶ್ರೀ ಅಮ್ಮನವರ ಭಂಡಾರವನ್ನು ಕೊಂಡೊಯ್ಯುವುದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಶ್ರೀ ಅಮ್ಮನ ಪ್ರಸಾದ ನಡೆಯಿತು. ರಾತ್ರಿ ಇರ್ದೆ ಬೆಟ್ಟಂಪಾಡಿ ಗೋಳಿಪದವು ಶ್ರೀ ದೇವಿ ಹವ್ಯಾಸಿ ಯಕ್ಷಗಾನ ಕಲಾ ಸಂಘದಿಂದ ಯಕ್ಷಗಾನ ಜರಗಿತು.
ಎ.27 ರಂದು ಪ್ರಾತಃಕಾಲ ಆರ್ಯಾಪು ನೇರಳಕಟ್ಟೆಯಲ್ಲಿ ಶ್ರೀ ಅಮ್ಮನವರನ್ನು ಪ್ರತಿಷ್ಠಾಪಿಸುವುದು, ಶ್ರೀ ಅಮ್ಮನವರ ದೂತರಿಗೆ ಬಲಿ ನೀಡುವುದು, ಮಧ್ಯಾಹ್ನ ಶ್ರೀ ಅಮ್ಮನವರಿಗೆ ಮಹಾಪೂಜೆ, ಅನ್ನದ ಕಲ್ಲಪೂಜೆ, ಸಪರಿವಾರ ದೈವಗಳಿಗೆ ಪೂಜೆ, ಮಡಸ್ಥಾನ ಸೇವೆ(ವಿಶೇಷ ಸೇವೆ), ಶ್ರೀ ಅಮ್ಮನವರು ಹಾಗೂ ಇತರೆ ದೈವಗಳಿಂದ ಆಭಯ ಸ್ವೀಕಾರ, ಆರ್ಯಾಪು ನೇರಳಕಟ್ಟೆಯಲ್ಲಿ ಶ್ರೀ ಅಮ್ಮನವರ ಮಹಾಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಅಮ್ಮನ ಪ್ರಸಾದ ನಡೆಯಿತು. ಸಂಜೆ ಶ್ರೀ ಅಮ್ಮನವರು ಹಾಗೂ ಸ-ಪರಿವಾರ ದೈವಗಳ ಭಂಡಾರವನ್ನು ಆರ್ಯಾಪು ನೇರಳಕಟ್ಟೆಯಿಂದ ದೇವಸ್ಥಾನಕ್ಕೆ ಕೊಂಡೊಯ್ಯುವುದು ಹಾಗೂ ಪ್ರತಿಷ್ಠಾಪಿಸುವುದು. ಎ.28 ರಂದು ಪೂರ್ವಾಹ್ನ ಶ್ರೀ ಅಮ್ಮನವರಿಗೆ ಶುದ್ಧಿ ಕಲಶ, ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಶಾಸಕ ಅಶೋಕ್ ಕುಮಾರ್ ರೈ ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತಿಲ ಪರಿವಾರ ಟ್ರಸ್ಟ್ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಸಂಪ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ ಸುರೇಶ್ ಪುತ್ತೂರಾಯ, ಸತೀಶ್ ನಾಯ್ಕ್ ಪರ್ಲಡ್ಕ ಸಹಿತ ಹಲವಾರು ಜನರು ಬಂದು ಶ್ರೀ ಅಮ್ಮನವರ ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಸತೀಶ್ ರೈ ಮಿಶನ್ ಮೂಲೆ ಹಾಗೂ ಆಡಳಿತ ಸಮಿತಿಯ ಅಧ್ಯಕ್ಷ ರವಿಚಂದ್ರ ಆಚಾರ್ಯ ಇವರು ಗಣ್ಯರನ್ನು ಗೌರವಿಸಿದರು.
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಗೋಪಾಲ್ ಬೆಟ್ಟಂಪಾಡಿ ಹಾಗೂ ಸುಂದರ ನೆಲ್ಲಿಗುಂಡಿ, ಪ್ರಧಾನ ಕಾರ್ಯದರ್ಶಿ ದಿನೇಶ್ ರೈ ಮೊಡಪ್ಪಾಡಿಮೂಲೆ, ಕೋಶಾಧಿಕಾರಿ ಸುರೇಶ್ ಪಿ, ಶ್ರೀ ಅಮ್ಮನವರ ಸೇವಾ ಸಮಿತಿ ಅಧ್ಯಕ್ಷ ಜಗನ್ನಾಥ ಪಿ., ಆಡಳಿತ ಸಮಿತಿ ಕಾರ್ಯದರ್ಶಿ ಲೋಕೇಶ್ ರೈ ಮೇರ್ಲ, ಪ್ರಧಾನ ಅರ್ಚಕ ಸುನಿಲ್ ಮಚ್ಚೇಂದ್ರ ಸಹಿತ ಹಲವರು ಭಕ್ತರು ಧಾರ್ಮಿಕ ಕ ಕಾರ್ಯದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.