ನವೋದಯ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು NMMS ವಿದ್ಯಾರ್ಥಿ ವೇತನಕ್ಕೆ ಆಯ್ಕೆ

0

ಪುತ್ತೂರು: 2024 – 25 ನೇ ಶೈಕ್ಷಣಿಕ ವರ್ಷದ 8 ನೇ ತರಗತಿಯ ಮಕ್ಕಳಿಗೆ ಇಲಾಖಾವತಿಯಿಂದ ನಡೆಸಲ್ಪಟ್ಟ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ (NMMS)ಯಲ್ಲಿ ನವೋದಯದ 12 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅವರಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 2 ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆಯಲು ಆಯ್ಕೆಯಾಗಿರುತ್ತಾರೆ.


ಚೂರಿಪದವಿನ ಮಹಮ್ಮದ್ ಶಾಬಿರ್ ಮತ್ತು ತಾಹಿರಾ ಇವರ ಪುತ್ರ ವಾಸಿಲ್ ಮುಬಾರಕ್ ಮತ್ತು ರೆಂಜದ ಬಿ.ಸೇಸಪ್ಪ ನಾಯ್ಕ ಮತ್ತು ವಸಂತಿ ಇವರ ಪುತ್ರಿ ಶ್ರಾವ್ಯ ಬಿ ಇವರು ವರ್ಷಕ್ಕೆ 12,000/ ರೂಪಾಯಿಯಂತೆ 4 ವರ್ಷಗಳ ಕಾಲ 48,000/ರೂಪಾಯಿ ವಿದ್ಯಾರ್ಥಿವೇತನವನ್ನು ಪಡೆಯಲು ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲಾ ಶಿಕ್ಷಕಿಯರಾದ ಭುವನೇಶ್ವರಿ ಎಂ, ಸುಮಂಗಲಾ ಕೆ, ಶೋಭಾ ಬಿ ಮತ್ತು ಗೌತಮಿ ಇವರು ವಿಶೇಷ ತರಬೇತಿಯನ್ನು ನೀಡಿ ಸಹಕರಿಸಿತ್ತಾರೆ ಎಂದು ಮುಖ್ಯಗುರು ಪುಷ್ಪಾವತಿ ಎಸ್ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here