ಬಡಗನ್ನೂರು: ಮುಡಿಪಿನಡ್ಕ-ಸುಳ್ಯಪದವು ಲೋಕೋಪಯೋಗಿ ರಸ್ತೆಯ ಕೊೖಲ ಅಪಾಯಕಾರಿ ತಿರುವು ಬಳಿ ರಸ್ತೆಯ ಇಕ್ಕಡೆಗಳಲ್ಲಿ ಹೊಂಡ ಬಿದ್ದು ವಾಹನ ಸಂಚಾರಕ್ಕೆ ಸಂಕಷ್ಟ ಉಂಟಾಗಿದ್ದು ಅಪಘಾತ ಸಂಭವಿಸುವ ಮುನ್ನ ರಸ್ತೆ ದುರಸ್ತಿ ಪಡಿಸುವಂತೆ ಸಾರ್ವಜನಿಕ ಆಗ್ರಹಿಸಿದ್ದರು.
ಸಮಸ್ಯೆ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಗೊಂಡು ತಿಂಗಳಾದರೂ ಇಲಾಖಾಧಿಕಾರಿಗಳು ಏಚ್ಚೆತ್ತುಕೊಳ್ಳದಿರುವುದರಿಂದ ಮುಂದೆ ಅಪಾಯ ಸಂಭವಿಸುದು ಖಚಿತ ಆನ್ನುದನ್ನು ಮನಗೂಂಡ ಕೖೊಲ ಬಡಗನ್ನೂರು ಪರಿಸರದ ಅಶೋಕ್ ರೖೆ ಅಭಿಮಾನಿ ಬಳಗದ ಸದಸ್ಯರಿಂದ ರಸ್ತೆ ಹೊಂಡ ಮುಚ್ಚುವ ಕೆಲಸವು ಮೇ.4ರಂದು ಶ್ರಮದಾನ ಮೂಲಕ ನಡೆಯಿತು.