ಚಿಕ್ಕಮೂಡ್ನೂರು: SSLC/PUC ಪರೀಕ್ಷೆಯಲ್ಲಿ Distinction: ವಿದ್ಯಾರ್ಥಿಗಳಿಗೆ ಬಿಜೆಪಿಯಿಂದ ಸನ್ಮಾನ

0

ಪುತ್ತೂರು: 2024-25ನೇ ಸಾಲಿನ SSLC ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ತೇರ್ಗಡೆಯಾದ ಚಿಕ್ಕಮೂಡ್ನೂರು ಗ್ರಾಮದ ಮೋಕ್ಷಿತ್ ಕೆ ಅವರನ್ನು ಬಿಜೆಪಿ ಶಕ್ತಿ ಕೇಂದ್ರ ಚಿಕ್ಕಮೂಡ್ನೂರು ಇದರ ವತಿಯಿಂದ ಸನ್ಮಾನಿಸಲಾಯಿತು. ಇವರು 551 ಅಂಕಗಳನ್ನು ಪಡೆದಿದ್ದರು. ಮೋಕ್ಷಿತ್ ಕೆ ಬೀರ್ನಹಿತ್ಲು ನಾಗರಾಜ್ ಮತ್ತು ಶೋಭಾ ದಂಪತಿಯ ಪುತ್ರ.

ಇದೇ ಸಂದರ್ಭದಲ್ಲಿ SSLC ಪರೀಕ್ಷೆಯಲ್ಲಿ 603 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ಸತೀಶ್ ಕೆ ಆಚಾರ್ಯ ಮತ್ತು ಶಾಂತಿ ಅವರ ಪುತ್ರಿ ಪ್ರಣಮ್ಯ ಅವರನ್ನೂ ಸನ್ಮಾನಿಸಿ ಶುಭ ಹಾರೈಸಿದರು.

PUC ಪರೀಕ್ಷೆ:
PUC ಯಲ್ಲಿ ಡಿಸ್ಟಿಂಕ್ಷನ್ ಪಡೆದು ತೇರ್ಗಡೆಯಾದ ಅನ್ವಿತಾ ಅವರನ್ನು ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು. ಇವರು ಬಿಜೆಪಿ ಕಾರ್ಯಕರ್ತೆ ಹರಿಣಿ ರಾಜೇಶ್ ದಂಪತಿಯ ಪುತ್ರಿ.

ಈ ಸಂದರ್ಭದಲ್ಲಿ ಚಿಕ್ಕಮೂಡ್ನೂರು ಬಿಜೆಪಿ ಶಕ್ತಿ ಕೇಂದ್ರ(134-135-140)ದ ಪದಾಧಿಕಾರಿಗಳು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here