ಆ ಅನ್ಯಾಯದ ವಿರುದ್ಧ ಕ್ರಮಗಳೇನು? ಗಲಭೆ, ಬಂದ್ ಬಿಟ್ಟರೆ ಬೇರೆ ನಡೆಯಿಲ್ಲವೇ?
ಹೀಗೆಯೇ ಮುಂದುವರಿದರೆ ದ.ಕ. ಜಿಲ್ಲೆಯ ಜನರ ಜೀವನದ ಗತಿಯೇನು?, ಸುರಕ್ಷಿತವೇ?
ಹಿಂದೂ-ಮುಸ್ಲಿಂ ಗಲಭೆ ಆಗುತ್ತಾ ಇರಲಿ ಎಂದು ಬಯಸುವ, ಸಜ್ಜನರ ಹೆಸರಿನ ಕ್ರೂರ ಮನಸ್ಸಿನ ದುರ್ಜನರೇ ಚರ್ಚೆಗೆ ಬನ್ನಿ, ಕೋಮುಗಲಭೆ ನಿಲ್ಲಿಸೋಣ
ಸಜ್ಜನ ಓದುಗರ ಅಭಿಪ್ರಾಯ ಎಂದು ಬರೆದ ಸಜ್ಜನರೇ… ಅದನ್ನು ನನಗೆ ನೋಡಲು ರವಾನಿಸಿದ ಸಿದ್ದಿಕ್ ನಿನಗೆ ಉತ್ತರ ಕೊಡುತ್ತೇನೆ – ಅದನ್ನು ಆ ಸಜ್ಜನರಿಗೆ ರವಾನಿಸು…
ನಮ್ಮಲ್ಲಿ ಕೆಲವರಿದ್ದಾರೆ ಅವರಿಗೆ ಸುದ್ದಿ ಬಿಡುಗಡೆಯಲ್ಲಿ ಅವರ ನ್ಯೂಸ್ ಬಂದಾಗ ಕಾಣುವುದಿಲ್ಲ.ಅದು ನಮ್ಮದರಲ್ಲಿ ಬಿಟ್ಟು ಬೇರೆ ಯಾವುದರಲ್ಲೂ ಬಂದಿರುವುದಿಲ್ಲ. ಆದರೂ ಅದಕ್ಕೆ.. ನಮಗೆ ಸಪೋರ್ಟ್ ಅವರು ಮಾಡುವುದಿಲ್ಲ ಎಲ್ಲಿಯಾದರೂ ಸಣ್ಣ ನ್ಯೂಸ್ ಬಾರದಿದ್ದರೆ ಪತ್ರಿಕೆ ಅವರ ವಿರೋಧಿ ಪತ್ರಿಕೆಯಾಗಿ ಬಿಡುತ್ತದೆ. ಜನರು ಒಳ್ಳೆಯದನ್ನು ಸ್ವೀಕರಿಸಬೇಕು ಅವರಿಗೆ ಅಸಮಾಧಾನವಾಗುವುದನ್ನೂ, ಸತ್ಯವಾಗಿದ್ದರೆ ಸ್ವೀಕರಿಸಬೇಕು. ಎಲ್ಲಾ ವಿಷಯದಲ್ಲಿ ಅವರಿಗೆ ಬೇಕಾದಂತೆ ಅವರ ದೃಷ್ಟಿ ಕೋನದಲ್ಲಿ ಬರೆಯಬೇಕಾದರೆ ಅವರ ಸ್ವಂತ ಪತ್ರಿಕೆ ಮಾಡಿಕೊಳ್ಳಬಹುದು. ಅಂತವರು ಹಿಂದೂ ಮುಸ್ಲಿಂ ಎರಡರಲ್ಲೂ ಇದ್ದಾರೆ. ನಮ್ಮಲ್ಲಿ ಮುಸ್ಲಿಂ ವಿರೋಧಿಗಳಾಗಿರುವ ಹಿಂದುಗಳಿದ್ದಾರೆ. ಹಾಗೆಯೇ ಹಿಂದೂ ವಿರೋಧಿ ಮುಸ್ಲಿಂಮರು ಇದ್ದಾರೆ. ಅವರ ದ್ವೇಷ ಸಾಧನೆಗಾಗಿ ಈ ಪತ್ರಿಕೆಯಲ್ಲ. ಆದರೆ ಸುದ್ದಿ ಅವರಿಗೂ ಒಳಿತಾಗಲಿ ಒಳ್ಳೆಯ ಸಾಮರಸ್ಯದ ಬುದ್ದಿ ಬರಲಿ ಎಂದು ಹಾರೈಸುತ್ತದೆ. ಅಂತಹ ಮನಸ್ಸಿನ ಎರಡೂ ಕಡೆಯವರು ಏನಾದರೂ ಮಾಡಿಕೊಳ್ಳಲಿ ಹೊಡೆದಾಡಿ ಸಾಯಲಿ. ಆದರೆ.. ಜನರಿಗೆ ತೊಂದರೆ ಕೊಡುವುದು ಬೇಡ. ಸಿದ್ದಿಕ್ ಇದು ನಿನಗಾಗಿ ಮಾತ್ರ ಹಂಚಿಕೊಳ್ಳಲು ಅಲ್ಲ. ಬೇಕಿದ್ದರೆ ಹಂಚಬಹುದು ಬರೆದವರು ನನ್ನೊಡನೆ ಚರ್ಚೆಗೆ ಬರಬಹುದು. ಬರಬೇಕು.. ಆಗ ಅವರ ಉದ್ದೇಶ ಜನರಿಗೆ ಅರ್ಥವಾಗುತ್ತದೆ. ನಮ್ಮ ಲೇಖನದ ಉದ್ದೇಶ, ಯಾರು ತಪ್ಪು ಮಾಡುತ್ತಾರೋ ಅವರಿಗೆ ಶಿಕ್ಷೆಯಾಗಬೇಕು. ಇತರರಿಗೆ ತೊಂದರೆಯಾಗಬಾರದು ಎಂಬುದಾಗಿದೆ.
ಕಾಶ್ಮೀರದಲ್ಲಿ ಮತ್ತು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಗಲಭೆಗಳು, ಬಂದ್ ಅಲ್ಲಲ್ಲಿ ಉಂಟಾಗಿರುವುದರಿಂದ ಅಂತಹ ಘಟನೆಗಳಿಗೆ ಬಂದ್ ಗಲಭೆ ನಡೆಸಬೇಡಿ ಎಂದು ಹೇಳಿದ್ದೇನೆ. ಅದರಿಂದ ಬಂದ್ ಗೆ ಕರೆ ಕೊಟ್ಟ ಹಿಂದೂ ಸಂಘಟನೆಗಳಿಗೆ ಬೇಸರವಾಗುತ್ತದೆ ಎಂದು ಗೊತ್ತಿದ್ದರೂ ಜನರ ಹಿತ ದೃಷ್ಟಿಯಿಂದ ಬರೆದಿದ್ದೇವೆ. ಬಂದ್ ಯಶಸ್ವಿ ಎಂದು ಎಲ್ಲಾ ಪತ್ರಿಕೆ ಬರೆದಿವೆ. ನಾವು ಬಂದ್ ನ ನ್ಯೂಸ್ ಹಾಕಿದ್ದೇವೆ ತೊಂದರೆಯಾಗಿರುವುದನ್ನು ಬರೆದಿದ್ದೇವೆ. ಹಿಂದೂ ಮುಸ್ಲಿಂ ಸರಣಿ ಹತ್ಯೆ ಆಗಬಾರದೆಂದು ಬರೆದಿದ್ದೇವೆ. ಒಳಪುಟದಲ್ಲಿ 9ನೇ ಪುಟದಲ್ಲಿ ಸರಣಿ ಹತ್ಯೆಗೊಳಗಾದವರ ವಿಷಯ ಫೋಟೋ ಹಾಕಿದ್ದೇವೆ. ಅದರಲ್ಲಿ ನೀನು ಕಳುಹಿಸಿದವ ಹೇಳಿದ ಫೋಟೋ ಇದೆ. ಬಂದ್ ಗಲಭೆ ಆಗಿದ್ದರೆ ಈಗ ಬರೆದವನ ಕಡೆಯವರಿಗೆ, ಇತರ ಎಲ್ಲರಿಗೂ ತೊಂದರೆಯಾಗುತ್ತಿತ್ತು. ಅದು ನಡೆಯಬಾರದು ಈಗ ಬಂದ್ ಕರೆ ಕೊಟ್ಟದ್ದು, ನಡೆದದ್ದು ತಪ್ಪು ಎಂದು ಬರೆದಿದ್ದೇನೆ ಎಲ್ಲಾ ಪತ್ರಿಕೆಯವರು ಬಂದ್ ಯಶಸ್ವಿ ಎಂದು ಬರೆದರೆ ನಾವು ಬಂದ್ ನಿಂದ ತೊಂದರೆ ಎಂದು ನ್ಯೂಸ್ ಬರೆದಿದ್ದೇವೆ. ಅಂದರೆ ಕೋಮುಗಲಭೆ ನಿಲ್ಲಲಿ ಎಂದು ಬರೆದಿದ್ದೇವೆ ಅದು ಯಾವುದೂ ಕಮೆಂಟ್ ಹಾಕಿದ ಬುದ್ದಿವಂತನಿಗೆ ಯಾಕೆ ಅರ್ಥವಾಗಲಿಲ್ಲ, ಕಾಣಲಿಲ್ಲ ಯಾಕೆಂದರೆ ಸುದ್ದಿ ಬಿಡುಗಡೆ ಹಿಂದು-ಮುಸ್ಲಿಂ ನಡುವೆ ಗಲಭೆ ಆಗದಂತೆ ನೋಡಿಕೊಳ್ಳುತ್ತಿದೆ.
ಅವನಿಗೆ ಗಲಾಟೆ ಆಗಬೇಕು ಹಾಗಿರುವಾಗ ಆತ ಸುದ್ದಿಬಿಡುಗಡೆಗೆ ವಿರೋಧ ಮಾಡದೇ ಇರುತ್ತಾನೆಯೇ?. ಹಿಂದುಗಳಲ್ಲಿ ಅವನಂತವರು ಕೆಲವರು ಇದ್ದಾರೆ ಅವರು ಸುದ್ದಿಬಿಡುಗಡೆ ವಿರೋಧಿಗಳು ಆಗಿದ್ದಾರೆ. ಹಿಂದೆ ಕೂರ್ನಡ್ಕದ ಹಕೀಂ ಅವನ ವರದಿ ಬರಲಿಲ್ಲವೆಂದು ಯಾವುದೋ ಇಂತಹ ವಿಷಯ ಹಿಡಿದುಕೊಂಡು ಸುದ್ದಿಗೆ ಜಾಹೀರಾತು ಕೊಡಬೇಡಿ ಎಂದು ಬರೆದಿದ್ದ. ಅವನಿಗೆ ಅದೇ ಕೆಲಸ ಇತ್ತು. ಈಚೆ ಕಡೆಯಲ್ಲಿ ದಿನೇಶ್ ಜೈನ್ ಗೂ ಅದೇ ಕೆಲಸ ಇತ್ತು. ಸುದ್ದಿಗೆ ಜಾಹೀರಾತು. ಕೊಟ್ಟದ್ದು ಯಾಕೆ ? ಕೊಡಬೇಡಿ ಅದು ಹಿಂದೂ ವಿರೋಧಿ, ಮುಸ್ಲಿಂ ಪರ ಎಂದು ಹೇಳುತ್ತಿದ್ದುದು ನಿನಗೆ ಗೊತ್ತಿದೆ. ಆಗ ಈಗ ಬರೆದ ಬುದ್ದಿವಂತ ಮತ್ತು ಇವನ ಕಡೆಯವರು ಬಂದು ನನಗೆ ಬೆಂಬಲ ಜಾಹೀರಾತು ಕೊಡಲಿಲ್ಲ ಯಾಕೆ? ಸುದ್ದಿಗೆ ಜಾಹೀರಾತು ಕೊಡಿ ಎಂದು ಯಾಕೆ ಹೇಳಲಿಲ್ಲ. ಅವನು ದಿನೇಶ್ ಜೈನ್ ಗಿಂತ ಕಡೆಯವನು ನಮ್ಮ ಲಾಭ ತೆಗೆದುಕೊಂಡು ಕೋಮು ಗಲಭೆ ಆಗಲಿ ಎಂದು ಪ್ರಯತ್ನಿಸುವ ಕ್ರೂರಿಗಳ ಸಾಲಿಗೆ ಅಂಥವರನ್ನು ಸೇರಿಸಬೇಕು. ಅವನಿಗೆ ಹೇಳು ಬಹಿರಂಗ ಚರ್ಚೆಗೆ ಬರಲಿ.. ಜನರ ಬದುಕು ಹಾಳು ಮಾಡುವುದು ಬೇಡ ಎಂದು ಹೇಳು.. ಅವನ ಮಾತನ್ನು ಬಿಡಿ ಸಜ್ಜನರೇ ಬನ್ನಿ.. ಕೋಮುಗಲಭೆ ನಿಲ್ಲಿಸೋಣ.
ಡಾ.ಯು.ಪಿ.ಶಿವಾನಂದ