ಪುತ್ತೂರು: ಸ್ಕೂಟರ್ ಮತ್ತು ಬೈಕ್ಗಳಿಗೆ ಜೀಪೊಂದು ಡಿಕ್ಕಿಯಾದ ಘಟನೆ ಪುತ್ತೂರು ಆದರ್ಶ ಆಸ್ಪತ್ರೆಯ ಬಳಿ ಮೇ.5ರಂದು ನಡೆದಿದೆ.
ಎಪಿಎಂಸಿ ರಸ್ತೆಯಿಂದ ನೆಲ್ಲಿಕಟ್ಟೆ ರಸ್ತೆಗೆ ಸಂಪರ್ಕ ಹೊಂದುವ ರಸ್ತೆಯಲ್ಲಿ ಚಲಿಸುತ್ತಿದ್ದ ಜೀಪು ಮುಂದಿದ್ದ ಸ್ಕೂಟರ್ ಮತ್ತು ಬೈಕ್ಗೆ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಜೀಪಿನ ಅಡಿಯಲ್ಲಿ ಸಿಲುಕಿದ್ದು, ಸ್ಕೂಟರ್ ತುಸು ದೂರ ಬಿದ್ದಿದೆ. ಸವಾರರಿಬ್ಬರಿಗೆ ಗಾಯವಾಗಿದ್ದು ಪಕ್ಕದ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.