ಪುತ್ತೂರು: ಕೆಪಿಟಿಸಿಎಲ್ ಡಿಪ್ಲೋಮಾ ಇಂಜಿನಿಯರ್ ಅಸೋಸಿಯೇಷನ್ ಬೆಂಗಳೂರು ಇದರ ಕೇಂದ್ರಕಾರಿ ಸಮಿತಿಯ ಚುನಾವಣೆಯಲ್ಲಿ ಮೆಸ್ಕಾಂ ಪುತ್ತೂರು ವಿಭಾಗದ ಪ್ರಭಾರ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುವ ರಾಮಚಂದ್ರ ಎ ರವರ ನೇತೃತ್ವದ ಯುವಶಕ್ತಿ ತಂಡದ ಎಲ್ಲಾ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಮೂಲಕ ರಾಮಚಂದ್ರ ಎ.ರವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.
ಸುಮಾರು ಇಪ್ಪತ್ತು ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಚುನಾವಣಾ ಮೂಲಕ ಕೇಂದ್ರ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆದಿರುತ್ತದೆ. ಸದ್ರಿ ಕೆಪಿಟಿಸಿಎಲ್ ಡಿಪ್ಲೊಮಾ ಇಂಜಿನಿಯರ್‍ಸ್ ಅಸೋಸಿಯೇಷನ್ ಕೆಪಿಟಿಸಿಎಲ್ ಮತ್ತು ರಾಜ್ಯದ ಎಲ್ಲಾ ಎಸ್ಕಾಂಗಳ ಸುಮಾರು 3500ಕ್ಕೂ ಹೆಚ್ಚು ಡಿಪ್ಲೊಮಾ ಇಂಜಿನಿಯರ್‍ಸ್‌ಗಳ ಸದಸ್ಯತ್ವ ಹೊಂದಿರುವ ಅಸೋಸಿಯೇಷನ್ ಇದರ ಕೇಂದ್ರ ಕಚೇರಿ ಬೆಂಗಳೂರು ನಲ್ಲಿ ಕಾರ್ಯಾಚರಿಸುತ್ತಿದೆ. ಇತಿಹಾಸದಲ್ಲಿ ಮೊದಲ ಬಾರಿ ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂಗಳ ವಿವಿಧ ಸಂಘಟನೆಗಳ ಕೇಂದ್ರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರು ಕೇಂದ್ರ ಸ್ಥಾನದಲ್ಲಿ ಕೆಲಸ ನಿರ್ವಹಿಸುವವರನ್ನು ಹೊರತುಪಡಿಸಿ ಇತರ ಎಸ್ಕಾಂನ ಪ್ರತಿನಿಧಿಗೆ ರಾಜ್ಯಾಧ್ಯಕ್ಷ ಸ್ಥಾನ ದೊರಕುವ ಮೂಲಕ ಇತಿಹಾಸ ನಿರ್ಮಾಣವಾಗಿದೆ.
ಪ್ರಸ್ತುತ ಮೆಸ್ಕಾಂನ ಪುತ್ತೂರು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುವ ಇವರು ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಯಲ್ಲೂ ಪ್ರಭಾರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಪ್ಪಿನಂಗಡಿ ಸಮೀಪ ಬೆದ್ರೋಡಿ ಮೂಲ ನಿವಾಸಿಯಾಗಿದ್ದಾರೆ.