ಬೊಳುವಾರು ವಿಶ್ವಕರ್ಮ ಯುವ ಸಮಾಜದ ಸ್ಥಾಪಕ ಅಧ್ಯಕ್ಷ ಬಿ.ಮನೋಹರ್ ಆಚಾರ್ಯ ನಿಧನ

0

ಪುತ್ತೂರು: ಬೊಳುವಾರು ವಿಶ್ವಕರ್ಮ ಯುವ ಸಮಾಜದ ಸ್ಥಾಪಕ ಅಧ್ಯಕ್ಷ, ಕರ್ಮಲ ನಿವಾಸಿ ಬಿ. ಮನೋಹರ್ ಆಚಾರ್ಯ (66ವ) ಮೇ.4ರಂದು ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

1985ರಲ್ಲಿ ಬೊಳುವಾರು ವಿಶ್ವಕರ್ಮ ಯುವ ಸಮಾಜ ಸ್ಥಾಪನೆಯಾದಾಗ, ಅದರ ಅಧ್ಯಕ್ಷರಾಗಿ ಸಂಘದಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಸಂಘದ ಬೆಳವಣಿಗೆಗೆ ಅಡಿಪಾಯ ಹಾಕಿದ್ದರು. 8೦ರ ದಶಕದಲ್ಲಿ ಚಿನ್ನದ ಕುಸುರಿ ಕೆತ್ತನೆ ಕೆಲಸದಲ್ಲಿ ಪ್ರಖ್ಯಾತಿ ಪಡೆದಿದ್ದರು. ಚಿನ್ನದ ಪದಕದಲ್ಲಿ ದೇವರ ಚಿತ್ರ ಬಿಡಿಸಿ, ಅದಕ್ಕೆ ಜೀವಂತಿಗೆ ತುಂಬುವಷ್ಟು ನಿಪುಣರು. ಇವರು ಹಲವು ವರ್ಷ ದುಬೈಯಲ್ಲಿಯೂ ಕೆಲಸ ನಿರ್ವಹಿಸಿದ್ದರು. ಮೃತರು ಪತ್ನಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here