ಪುತ್ತೂರು: ಪುತ್ತೂರಿನ ಕುಂಟ್ಯಾನದಲ್ಲಿ ವಾಸವಾಗಿರುವ ಮೂಲತಃ ಕಳಂಜ ಗ್ರಾಮದವರಾದ ನಿವೃತ್ತ ಕೃಷಿ ಇಲಾಖಾ ಸಿಬ್ಬಂದಿ ಚೆನ್ನಕೇಶವ ನಾಯ್ಕ ಅಸೌಖ್ಯದಿಂದ ಮೇ. 5ರಂದು ಸ್ವಗೃಹ ಕನಕಶ್ರೀ ಕುಂಟ್ಯಾನದಲ್ಲಿ ನಿಧನರಾದರು.
ಇವರಿಗೆ 62 ವರ್ಷ ವಯಸ್ಸಾಗಿತ್ತು. ಇವರು ಬಂಟ್ವಾಳ, ಬೆಳ್ತಂಗಡಿ ಮತ್ತು ಪುತ್ತೂರು ಕೃಷಿ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರು ಪತ್ನಿ ಶ್ರೀಮತಿ ಪುಷ್ಪಾವತಿ, ಪುತ್ರ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ವರುಣ್, ಪುತ್ರಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ವೈಶಾಲಿ, ಸಹೋದರ ಧನಂಜಯ ನಾಯ್ಕ ಕಳಂಜ, ಸಹೋದರಿಯರಾದ ಶ್ರೀಮತಿ ನೀಲಮ್ಮ ಅಜೇರು, ಶ್ರೀಮತಿ ಜಾನಕಿ ನೆರಿಮುಗೇರು, ಶ್ರೀಮತಿ ಲಕ್ಷ್ಮೀ ಕಲ್ಮಡ್ಕ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.