ಪುತ್ತೂರು: ಅನಂತಾಡಿ ಗ್ರಾಮದ ಗಾಣದಕೊಟ್ಯ ನಿವಾಸಿ ಕೊಂಬು ವಾದನ ಕಲೆಯಲ್ಲಿ ಪರಿಣಿತರಾಗಿದ್ದ ಪೂವಪ್ಪ ಸಪಲ್ಯ (85 ವ.)ರವರು ಮೇ.6 ರಂದು ಸ್ವಗೃಹದಲ್ಲಿ ನಿಧನರಾದರು . ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ.
ದಕ್ಷಿಣ ಕನ್ನಡದ ಶ್ರೇಷ್ಠ ಕೊಂಬು ವಾದಕ ದೈವಾರಾಧನಾ ಕ್ಷೇತ್ರದಲ್ಲಿ ಅನಂತಾಡಿ ಕೊಂಬು, ಕಂಬಳ ಕ್ಷೇತ್ರದಲ್ಲಿ ಕಂಕನಾಡಿ ಕೊಂಬು ಎಂದು ಪ್ರಖ್ಯಾತರಾಗಿದ್ದ ಇವರು ಜಿಲ್ಲೆಯ ಪ್ರಮುಖ ಕಾರಣಿಕ ಕ್ಷೇತ್ರ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಸೇವೆಯನ್ನು ಮಾಡುತಿದ್ದರು. ‘ಅನಂತಾಡಿ ಕೊಂಬು’ ಎಂಬುದು ಇವರ ಪದ ನಾಮವಾಗಿತ್ತು. ಇವರ ಸಾಧನೆಯಿಂದ ಹಲವಾರು ಸಂಘಸಂಸ್ಥೆಗಳಿಂದ ಸನ್ಮಾನಿತರಾಗಿದ್ದರು.