ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ತರಬೇತಿ ಪಡೆದ 2 ವಿದ್ಯಾರ್ಥಿಗಳು NMMS ಪರೀಕ್ಷೆಯ ವಿದ್ಯಾರ್ಥಿವೇತನಕ್ಕೆ ಆಯ್ಕೆ

0

ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 2024-25ನೇ ಸಾಲಿನ ಎನ್.ಎಮ್.ಎಮ್.ಎಸ್.(NMMS) 8ನೇ ತರಗತಿಯ ವಿದ್ಯಾರ್ಥಿ ವೇತನ ಪರೀಕ್ಷೆಗೆ ತರಬೇತಿಯನ್ನು ಪಡೆದುಕೊಂಡ 2 ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುತ್ತಾರೆ. ಪಾಲ್ತಡಿ ಗ್ರಾಮ ಬೊಳಿಯಾಲ ನಿವಾಸಿಗಳಾದ ದಿವಾಕರ ಬಂಗೇರ ಹಾಗೂ ಜಯಂತಿ ದಂಪತಿಗಳ ಪುತ್ರಿಯಾದ ಕು. ಪೂಜಾಶ್ರೀ ಡಿ. ಇವರು ಒಟ್ಟು 116 ಅಂಕಗಳನ್ನು ಪಡೆದಿರುತ್ತಾರೆ ಹಾಗೂ ಪುತ್ತೂರು ತಾಲೂಕಿನ ಸೂತ್ರಬೆಟ್ಟು ನಿವಾಸಿಗಳಾದ ಆರ್. ಮುರುಗ ದಾಸ್ ಹಾಗೂ ಕನ್ನಿಮೊಳಿ ದಂಪತಿಗಳ ಸುಪುತ್ರಿಯಾದ ಕು. ಲೇಖಶ್ರೀ ಇವರು ಒಟ್ಟು 103 ಅಂಕಗಳನ್ನು ಪಡೆದು ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ. ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2025-26ನೇ ಸಾಲಿನ ಎನ್.ಎಮ್. ಎಮ್. ಎಸ್.(NMMS) 8ನೇ ತರಗತಿಯ ಪ್ರವೇಶ ಪರೀಕ್ಷೆಗೆ ತರಬೇತಿ ಶಿಬಿರವು ಪ್ರಾರಂಭಗೊಂಡಿದೆ ಎಂದು ಪ್ರಾಂಶುಪಾಲರಾದ ಕೆ. ಹೇಮಲತಾ ಗೋಕುಲ್‌ನಾಥ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಸಂಸ್ಥೆಯ ಕಛೇರಿಗೆ ಮುಖತಃ ಅಥವಾ ದೂರವಾಣಿ ಮುಖಾಂತರ ಸಂಸ್ಥೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು.

ದೂರವಾಣಿ ಸಂಖ್ಯೆ: 9900109490, 8123899490 ಸ್ಥಳ: ಪ್ರಗತಿ ಸ್ಟಡಿ ಸೆಂಟರ್, 2ನೇ ಮಹಡಿ, ಧರ್ಮಸ್ಥಳ ಬಿಲ್ಡಿಂಗ್, ಮುಖ್ಯರಸ್ತೆ ಪುತ್ತೂರು, 574201 ದ.ಕ., ಕಛೇರಿ ಬೆಳಗ್ಗೆ ಗಂಟೆ 9.30 ರಿಂದ ಸಂಜೆ 6.00 ರವರೆಗೆ ತೆರೆದಿರುತ್ತದೆ.

LEAVE A REPLY

Please enter your comment!
Please enter your name here