ದ.ಕ.ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿ : ಅಧ್ಯಕ್ಷರಾಗಿ ರವಿರಾಜ ಹೆಗ್ಡೆ ಕೊಡವೂರು, ಉಪಾಧ್ಯಕ್ಷರಾಗಿ ಉದಯ್ ಎಸ್. ಕೋಟ್ಯಾನ್ ಅವಿರೋಧ ಆಯ್ಕೆ

0

ಪುತ್ತೂರು: ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮೇ.6ರಂದು ನಡೆಯಿತು.ರಿಟರ್ನಿಂಗ್ ಅಧಿಕಾರಿ ರಾಜು ಬಿ. ಚುನಾವಣೆ ಪ್ರಕ್ರಿಯೆ ನಡೆಸಿದರು.

ನೂತನ ಅಧ್ಯಕ್ಷರಾಗಿ ರವಿರಾಜ ಹೆಗ್ಡೆ ಕೊಡವೂರು ಹಾಗೂ ಉಪಾಧ್ಯಕ್ಷರಾಗಿ ಉದಯ್ ಎಸ್. ಕೋಟ್ಯಾನ್ ಅವಿರೋಧವಾಗಿ ಆಯ್ಕೆಗೊಂಡರು.

ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರಾದ. ಕೆ,ಪಿ. ಸುಚರಿತ ಶೆಟ್ಟಿ, ಎಸ್. ಬಿ. ಜಯರಾಮರೈ, ಪ್ರಕಾಶ್ಚಂದ್ರ ಶೆಟ್ಟಿ, ಎನ್. ಮಂಜಯ್ಯ ಶೆಟ್ಟಿ, ಬಿ. ಸುಧಾಕರ ರೈ, ಸವಿತಾ ಎನ್. ಶೆಟ್ಟಿ, ಸುಧಾಕರ ಶೆಟ್ಟಿ, ಕೆ. ಚಂದ್ರಶೇಖರ್ ರಾವ್, ಕೆ. ಶಿವಮೂರ್ತಿ, ದೇವಿಪ್ರಸಾದ್ ಶೆಟ್ಟಿ, ನಂದರಾಮ್ ರೈ, ಮಮತಾ ಆರ್. ಶೆಟ್ಟಿ, ಹೆಚ್. ಪ್ರಭಾಕರ, ಭರತ್ ಎನ್. ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ. ಹಾಜರಿದ್ದರು.

ರವಿರಾಜ ಹೆಗ್ಡೆ
ರವಿರಾಜ ಹೆಗ್ಡೆಯವರು 2009-2014, 2014-2019 ಹಾಗೂ 2019-2022 ಅವಧಿಯಲ್ಲಿ ದ.ಕ. ಹಾಲು ಒಕ್ಕೂಟದ ಅಧ್ಯಕ್ಷರಾಗಿ, ಕೆ.ಎಂ.ಎಫ್.ನ ಆಡಳಿತ ಮಂಡಳಿ ಮಾಜಿ ನಿರ್ದೇಶಕರಾಗಿ ಹಾಗೂ ವಿವಿಧ ಸಹಕಾರಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದು ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಪಡೆದಿರುತ್ತಾರೆ.

ಉದಯ್ ಎಸ್. ಕೋಟ್ಯಾನ್
ಉದಯ್ ಎಸ್. ಕೋಟ್ಯಾನ್ ಇವರು ತಾಲೂಕು ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ, ಮಿಯ್ಯಾರು ಹಾಗೂ ಬಜಗೋಳಿ ಜಿ.ಪಂ. ಮಾಜಿ ಸದಸ್ಯರಾಗಿ, ದ.ಕ. ಹಾಲು ಒಕ್ಕೂಟದ ಮಾಜಿ ನಿರ್ದೇಶಕರಾಗಿ ಹಾಗೂ ಸಾಣೂರು ವ್ಯವಸಾಯ ಸಂಘದ ಮಾಜಿ ಅಧ್ಯಕ್ಷರಾಗಿ ಸೇವೆಯನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here