ಕೆದಂಬಾಡಿ ಕೋಡಿಯಡ್ಕ ಮಾಡ ಶ್ರೀನಾಗಬ್ರಹ್ಮ, ಶ್ರೀ ಶಿರಾಡಿ ದೈವಸ್ಥಾನದಲ್ಲಿ ನೇಮೋತ್ಸವ

0

ಪುತ್ತೂರು: ಕೆದಂಬಾಡಿ ಗ್ರಾಮದ ಕೋಡಿಯಡ್ಕ ಮಾಡ ಶ್ರೀನಾಗಬ್ರಹ್ಮ ಮತ್ತು ಶ್ರೀ ಶಿರಾಡಿ ದೈವಸ್ಥಾನದ ಸ್ಥಳ ಸಾನಿಧ್ಯ ಕುಕ್ಕುಂಜೋಡು-ಬದಿನಾರು ದೈವಗಳ ಕಟ್ಟೆ ಮುಂಡಾಳಗುತ್ತು ಇದರ ವತಿಯಿಂದ ಮೂರು ವರ್ಷಗಳಿಗೊಮ್ಮೆ ನಡೆಯುವ ಶ್ರೀ ದೈವಗಳ ನೇಮೋತ್ಸವ ಮೇ.3ರಂದು ಜರಗಿತು.

ಪೂರ್ವಹ್ನ ಕೆದಂಬಾಡಿ ಗ್ರಾಮದ ಶ್ರೀ ಶೀರಾಡಿ ದೈವಸ್ಥಾನ ಇದ್ಪಾಡಿ ಮಂಜಕೊಟ್ಯದಿಂದ ಶ್ರೀ ದೈವಗಳ ಕಿರ್ವಾಳು ಭಂಡಾರ ಇಳಿಸಿ, ಕೋಡಿಯಡ್ಕ ಮಾಡಕ್ಕೆ ಆಗಮಿಸಿತು. ಬಳಿಕ ಶ್ರೀ ದೈವಗಳ ನೇಮೋತ್ಸವ, ಬೂಳ್ಯ ಪ್ರಸಾದ ವಿತರಣೆ ನಡೆದು, ಅನ್ನಸಂತರ್ಪಣೆ ಜರಗಿತು. ಸಂಜೆ ಮುಂಡಾಳಗುತ್ತು ಬಾಕಿತ್ತಿಮಾರು ಗದ್ದೆಯಿಂದ ಕುಕ್ಕುಂಜೋಡು ಬದಿನಾರು ಕಟ್ಟೆಗೆ ಶ್ರೀ ಉಳ್ಳಾಕುಲು ಮತ್ತು ಜುಮಾದಿ ಪರಿವಾರ ದೈವಗಳ ಒಲೆಸವಾರಿ ನಡೆದು, ಲೆಕ್ಕೆಸಿರಿ, ಗುಳಿಗ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಿತು. ರಾತ್ರಿ ಅನ್ನಸಂತರ್ಪಣೆ ಜರಗಿತು. ಮುಂಡಾಳಗುತ್ತು ಯಜಮಾನರಾದ ನಿವೃತ್ತ ಡಿವೈಎಸ್‌ಪಿ ಶಾಂತಾರಾಮ ರೈ, ಮಾಕೂರು ಶುಭವತಿ ಶಾಂತರಾಮ ರೈ, ನೇಮೋತ್ಸವದ ಸೇವಾರ್ಥಿ ಡಿಂಬ್ರಿಗುತ್ತು ಉಮೇಶ್ ರೈ. ಮುಂಡಾಳಗುತ್ತು ಸುರೇಂದ್ರ ರೈ, ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾೖಕ್, ಕಡಮಜಲು ಸುಭಾಸ್ ರೈ, ಮುಂಡಾಳಗುತ್ತು ಕುಮುದಾ ಲಕ್ಷ್ಮೀನಾರಾಯಣ ಶೆಟ್ಟಿ, ಕರುಣಾಕರ ರೈ ಅತ್ರೆಜಾಲು, ವಿಜಯ ರಾಮಕೃಷ್ಣ ಅಡ್ಯಂತಾಯ, ಮುಂಡಾಳಗುತ್ತು ಡಾ.ಮಂಜುನಾಥ ರೈ, ಮುಂಡಾಳಗುತ್ತು ಸುಧಾಕರ್ ರೈ, ಮುಂಡಾಳಗುತ್ತು ಮೋಹನ್ ಆಳ್ವ, ಮುಂಡಾಳಗುತ್ತು ವಿನೋದ್ ಕುಮಾರ್ ರೈ, ಮಾಧವ ರೈ ಆರಂತನಡ್ಕ, ಸುಧಾಕರ್ ರೈ ಕೈಕಾರ, ಮುಂಡಾಳಗುತ್ತು ಸುಜಯ ವಿ.ರೈ ಪಾಲ್ತಾಡು, ಮುಂಡಾಳಗುತ್ತು ಸುಹಾಸಿನಿ ಕೃಷ್ಣ ರೈ, ಶ್ಯಾಮ್ ಸುಂದರ್ ರೈ ಕೊಪ್ಪಳ, ಡಾ.ಸುಭಾಷ್ ರೈ ನುಳಿಯಾಲು, ಮುಂಡಾಳಗುತ್ತು ವಸಂತಿ ಶೆಟ್ಟಿ, ರಾಮಕೃಷ್ಣ ಅಡ್ಯಂತಾಯ, ಮುಂಡಾಳಗುತ್ತು ಪ್ರಭಾಕರ್ ರೈ, ಮುಂಡಾಳಗುತ್ತು ಇಂದಿರಾ ರೈ,ಮುಂಡಾಳಗುತ್ತು ಗುಲಾಬಿ ರೈ, ಮುಂಡಾಳಗುತ್ತು ವಿಶಾಲಕ್ಷಿ ರೈ, ಶಾಂತಾ ಕರುಣಾಕರ್ ರೈ ಅತ್ರೆಜಾಲು, ವಿಜಯಲಕ್ಷ್ಮೀ ರೈ ಕೋಲ್ಲಾಜೆ, ಸಾರ್ಥಕ್ ರೈ ಅರಿಯಡ್ಕ, ಚಿರಾಗ್ ರೈ ಬೆದ್ರುಮಾರ್, ಸುಧೀರ್ ಶೆಟ್ಟಿ, ಕುಸುಮಾ ಸಿ. ರೈ ದರ್ಬೆ, ಅನಿಲ್ ರೈ ದರ್ಬೆ, ರಾಜೀವ ರೈ ಕೋರಂಗ, ಪುಷ್ಪಾವತಿ ರಘುನಾಥ ರೈ ಮಾಣಿಪ್ಪಾಡಿ ಬಾರಿಕೆ, ನಾರಾಯಣ ಪೂಜಾರಿ ಕೊಡಿಯಡ್ಕ, ಪದ್ಮನಾಭ ಗೌಡ ಮುಂಡಾಳ, ಅಮಿತಾ ರೈ ಕೋರಂಗ, ಮುಂಡಾಳಗುತ್ತು ಸುರೇಶ್ ರೈ ಮಾಣಿಪ್ಪಾಡಿ, ರಾಘವ ಗೌಡ ಕೆರೆಮೂಲೆ,, ದಿನಕರ ರೈ ಮಾಣಿಪ್ಪಾಡಿ, ಕರುಣಾಕರ ರೈ ಕೋರಂಗ, ರಕ್ಷಿತ್ ಗೌಡ ಇದ್ಯಪ್ಪೆ, ನೂತನ್ ಗೌಡ ಇದ್ಯಪ್ಪೆ, ಶೇಖರ್ ಗೌಡ ಮುಂಡಾಳ, ಸುಚೇತ್ ಶೆಟ್ಟಿ ಪುಂಡಿಕಾಯಿ, ಸುದೇಶ್ ರೈ, ಸಬಿತಾ ಭಂಡಾರಿ, ಶಿವರಾಮ ಗೌಡ ಇದ್ಯಪೆ, ಗೀತಾ ಸಂತೋಷ್ ರೈ ಇದ್ಪಾಡಿ, ಬಾಲಕೃಷ್ಣ ಗೌಡ ಮುಂಡಾಳ, ಮೋಹನ್ ಗೌಡ, ಸುಂದರ ಪೂಜಾರಿ, ಕೊಡಂಕೀರಿ ಪದ್ಮಾವತಿ ರೈ ಡಿಂಬ್ರಿ, ಪ್ರವೀಣ್ ಪೂಜಾರಿ ಕೋಡಿಯಡ್ಕ, ರಾಜೇಶ್ ಮುಂಡಾಳ, ಪುಷ್ವವತಿ ರೈ ಮುಂಡಾಳ, ಶೀನಪ್ಪ ಪೂಜಾರಿ ಮಾರುತಿಪುರ, ಮುರಳೀಧರ್ ರೈ ಬೆದ್ರುಮಾರ್ ಸಹಿತ ಅನೇಕ ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here