ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ : ಗಣತಿದಾರರಿಗೆ ತರಬೇತಿ, ಕೈಪಿಡಿ ವಿತರಣಾ ಕಾರ್ಯಕ್ರಮ

0

ಪುತ್ತೂರು: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಯ ಉದ್ಧೇಶದಿಂದ ರಾಜ್ಯ ಸರಕಾರ ಹಮ್ಮಿಕೊಂಡ “ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025″ರ ಕುರಿತಂತೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯವರ ಮನೆ ಮನೆ ಸಮೀಕ್ಷೆ ಕೈಗೊಳ್ಳಲಿರುವ ಗಣತಿದಾರರಿಗೆ ತರಬೇತಿ ಹಾಗೂ ಕೈಪಿಡಿ ವಿತರಣಾ ಕಾರ್ಯಕ್ರಮ ಮೇ.5ರಂದು ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.

ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕಕರಿಗೆ ಹಲವು ಕೆಲಸ ಇರುತ್ತದೆ. ಇದರ ನಡುವೆಯೂ ನಿಮಗೆ ಗಣತಿ ಕಾರ್ಯ ನೀಡಲಾಗಿದೆ. ರಜೆಯ ಮಜ ಅನುಭವಿಸುವ ಈ ಸಮಯದಲ್ಲಿ ಸರಕಾರದ ಸುತ್ತೋಲೆಯಂತೆ ಕೆಲಸ ಕೊಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಶಿಕ್ಷಕರನ್ನು ನಿಯೋಜಿಸಲಾಗಿದೆ. ಸಮೀಕ್ಷೆಗೆ ಪೂರಕವಾಗಿ ನಿಮಗೆ ತರಬೇತಿ ನೀಡಲಾಗುತ್ತದೆ. ನಿಮಗೆ ಕೊಡಲಾಗುವ ಕೈಪಿಡಿಯ ಸೂಚನೆಯಂತೆ ಸಮೀಕ್ಷೆ ಮಾಡಿ. ನಮ್ಮೆಲ್ಲರ ಸಹಕಾರ ನಿಮಗೆ ಇದೆ ಎಂದು ಹೇಳಿದರು.

ನಗರಸಭಾ ಪೌರಾಯುಕ್ತ ಮಧುಮನೋಹರ್ ಗಣತಿದಾರರಿಗೆ ಸಾಂಕೇತಿಕವಾಗಿ ಗಣತಿಯ ಕಿಟ್ ವಿತರಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ, ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯಶಿಕ್ಷಕ ವಂ.ಮ್ಯಾಕ್ಸಿಮ್ ಡಿಸೋಜ, ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಪ್ರೇಮ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿ.ಆರ್.ಸಿ ಸಿಬಂದಿ ಶ್ರೀನಿಧಿ ಹಾಗೂ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ವಸಂತ ಮೂಲ್ಯ ಪಿ. ಗಣತಿದಾರರಿಗೆ ತರಬೇತಿ ನೀಡಿದರು.

221 ಗಣತಿದಾರರು, 24 ಮೇಲ್ವಿಚಾರಕರು, 6 ತರಬೇತುದಾರರು
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಗಣತಿ ಕಾರ್ಯಕ್ಕೆ 221 ಸಮೀಕ್ಷಾದಾರರನ್ನು ನೇಮಕ ಮಾಡಲಾಗಿದೆ. 24 ಮೇಲ್ವಿಚಾರಕರು, 6 ಮಂದಿ ಮಾಸ್ಟರ್ ತರಬೇತುದಾರರು ಗಣತಿಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೇ.17ರವರಗೆ 221 ಮತಗಟ್ಟೆವಾರು ಗಣತಿ ಕಾರ್ಯ
ಮೇ.5.ರಿಂದ 17ರವರೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ 221 ಮತಗಟ್ಟೆವಾರು ಗಣತಿಕಾರ್ಯ ನಡೆಯಲಿದೆ. ಗಣತಿದಾರರು ಪರಿಶಿಷ್ಟ ಜಾತಿಯವರ ಮನೆ ಮನೆ ಸಮೀಕ್ಷೆ ಕಾರ್ಯಕ್ಕೆ ಬರುವಾಗ ಕುಟುಂಬ ಸದಸ್ಯರು ಎಲ್ಲಾ ಮಾಹಿತಿಗಳನ್ನು ನಿಖರವಾಗಿ ನೀಡಿ ಸಹಕರಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here