ಪುತ್ತೂರು: ಫೈರ್ ಆ್ಯಂಡ್ ಸೇಫ್ಟಿ ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡುವ ಚಲಿಸುವ ಮಾಹಿತಿ ಕೇಂದ್ರ ಮತ್ತು ಜಾಹೀರಾತು ವಾಹನ ನಿಮ್ಮ ಮನೆ ಬಾಗಿಲಿಗೆ ಬರಲಿದೆ.
ಮಂಗಳೂರು ಇನ್ ಸ್ಟಿಟ್ಯೂಟ್ ಆಫ್ ಫೈರ್ ಆ್ಯಂಡ್ ಸೇಫ್ಟಿ ಇಂಜಿನಿಯರಿಂಗ್ ಸಂಸ್ಥೆ ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಿದ್ದು, ಚಲಿಸುವ ಮಾಹಿತಿ ಕೇಂದ್ರ ಮತ್ತು ಜಾಹೀರಾತು ವಾಹನ ಪುತ್ತೂರು,ಸುಳ್ಯ, ಕಡಬ ಮತ್ತು ಬಂಟ್ವಾಳ ತಾಲೂಕಿನಾದ್ಯಂತ ಮನೆ ಮನೆಗೆ ಬರಲಿದ್ದು, ಫೈರ್ ಆ್ಯಂಡ್ ಸೇಫ್ಟಿ ಕೋರ್ಸ್ ಬಗ್ಗೆ ಸಚಿತ್ರ ಮಾಹಿತಿ ನೀಡಲಿದೆ.
ಪ್ರಸಕ್ತ ವರ್ಷದಲ್ಲಿ ಸಂಸ್ಥೆ ಪುತ್ತೂರಿನ ಪ್ರಗತಿ ಸ್ಟಡೀ ಸೆಂಟರ್ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಶೈಕ್ಷಣಿಕ ವರ್ಷದಿಂದ ಪುತ್ತೂರಿನಲ್ಲಿ ಫೈರ್ ಆ್ಯಂಡ್ ಸೇಫ್ಟಿ ಕೋರ್ಸ್ ಪ್ರಾರಂಭಗೊಳ್ಳಲಿದೆ. ಈ ಕುರಿತು ಜನ ಗಣ ಮನಕ್ಕೆ ಮಾಹಿತಿ ನೀಡುವ ಸಲುವಾಗಿ ಚಲಿಸುವ ಜಾಹೀರಾತು ಮತ್ತು ಮಾಹಿತಿ ಕೇಂದ್ರಕ್ಕೆ ಪುತ್ತೂರಿನಲ್ಲಿ ಚಾಲನೆ ನೀಡಲಾಯಿತು. ಪ್ರಗತಿ ಸ್ಟಡೀ ಸೆಂಟರ್ ಸಂಚಾಲಕ ಪಿ ವಿ ಗೋಕುಲ್ನಾಥ್ ಫ್ಲಾಗ್ ಆಫ್ ಮಾಡುವ ಮೂಲಕ ಮೇ.9ರಂದು ವಾಹನಕ್ಕೆ ಚಾಲನೆ ನೀಡಿದರು.
ಮಂಗಳೂರು ಇನ್ ಸ್ಟಿಟ್ಯೂಟ್ ಆಫ್ ಫೈರ್ ಆ್ಯಂಡ್ ಸೇಫ್ಟಿ ಇಂಜಿನಿಯರಿಂಗ್ (MIFSE), ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಭಾರತ ಸರಕಾರದ ಎನ್ಎಸ್ಡಿಸಿ ಸ್ಕಿಲ್ ಇಂಡಿಯಾ ಮಾನ್ಯತೆ ಪಡೆದಿದ್ದು, ಫೈರ್ ಆ್ಯಂಡ್ ಸೇಫ್ಟಿ , ಹೆಲ್ತ್ ಆ್ಯಂಡ್ ಸೇಫ್ಟಿ, ಲಾಜಿಸ್ಟಿಕ್ ಆ್ಯಂಡ್ ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ನಲ್ಲಿ ಡಿಪ್ಲೋಮಾ, ಪಿಜಿ ಡಿಪ್ಲೋಮಾ, ಬಿಬಿಎ, ಮತ್ತು ಎಂಬಿಎ ಪದವಿ ಕೋರ್ಸ್ಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಪ್ರಸಕ್ತ ವರ್ಷದಲ್ಲಿ ಪುತ್ತೂರಿನ ಪ್ರಗತಿ ಸ್ಟಡೀ ಸೆಂಟರ್ ನಲ್ಲಿ ಕೋರ್ಸ್ ಗಳು ಆರಂಭಗೊಳ್ಳಲಿದ್ದು ಆಸಕ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಸ್ಥೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.