ಪುತ್ತೂರು: ದಾರುಲ್ ಹಸನಿಯಾ ಅಕಾಡೆಮಿ ಸಾಲ್ಮರ ಇದರ ಹೊಸ ಶೈಕ್ಷಣಿಕ ವರ್ಷದ ತರಗತಿ ಉದ್ಘಾಟನೆ ಮತ್ತು ಈ ವರ್ಷ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಶರಫುದ್ದೀನ್ ತಂಙಳ್ ಸಾಲ್ಮರ ಅವರು, ಸಂಸ್ಥೆಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಹಜ್ ಯಾತ್ರಾರ್ಥಿಗಳಿಗೆ ವಿಶೇಷ ಪ್ರಾರ್ಥನೆ ನಡೆಸಿದರು.
ಸಯ್ಯಿದ್ ಅನಸ್ ತಂಙಳ್ ಕರ್ವೆಲ್ ಕಾರ್ಯಕ್ರಮ ಉದ್ಘಾಟಿಸಿದರು. ಸಯ್ಯಿದ್ ಯಹ್ಯಾ ತಂಙಳ್ ಪೋಳ್ಯ ಅವರು ಪ್ರಸಕ್ತ ಶೈಕ್ಷಣಿಕ ವರ್ಷದ ಕುರ್ಆನ್ ಹಿಫ್ಲ್ ತರಗತಿಗೆ ಚಾಲನೆ ನೀಡಿದರು.
ಖ್ಯಾತ ಹಜ್-ಉಮ್ರಾ ತರಬೇತುದಾರರಾದ ಸಿರಾಜುದ್ದೀನ್ ಫೈಝಿ ಬಪ್ಪಳಿಗೆ ಮತ್ತು ಅಬ್ದುಲ್ ಹಮೀದ್ ಬಾಖವಿ ಬೈರಿಕಟ್ಟೆ ಹಜ್ ಯಾತ್ರೆಯ ಮಹತ್ವದ ಬಗ್ಗೆ ವಿವರಿಸಿದರು.
ಸಂಸ್ಥೆಯ ವ್ಯವಸ್ಥಾಪಕ ಅಬ್ದುಲ್ ಕರೀಂ ದಾರಿಮಿ, ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜ್ನ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ, ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಅಬ್ಬಾಸ್ ಮದನಿ, ಪುತ್ತೂರು ಸಂಯುಕ್ತ ಜಮಾಅತ್ ಕಾರ್ಯದರ್ಶಿ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ, ಅಬ್ದುಲ್ ಹಮೀದ್ ಕರಾವಳಿ ಮೊದಲಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರ.ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ಮುದರ್ರಿಸ್ ಇಸ್ಮಾಯಿಲ್ ಅನ್ಸಾರಿ, ಹಾಫಿಲ್ ಸಲ್ಮಾನುಲ್ ಫಾರಿಸ್, ಇಸ್ಮಾಯಿಲ್ ಅಝ್ಹರಿ, ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಅಫ್ಹಾಮ್ ತಂಙಳ್ ಕರಾವಳಿ, ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರ.ಕಾರ್ಯದರ್ಶಿ ಯು.ಮುಹಮ್ಮದ್ ಹಾಜಿ ಪಡೀಲ್, ಉದ್ಯಮಿಗಳಾದ ಬಶೀರ್ ಹಾಜಿ ದಾರಂದಕುಕ್ಕು, ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ಹಂಝ ಹಾಜಿ ಸಾಲ್ಮರ, ಸುಲೈಮಾನ್ ಹಾಜಿ ಸಾಲ್ಮರ, ಅಬ್ದುಲ್ಲಾ ಹಾಜಿ ಪುರುಷರಕಟ್ಟೆ, ಡಿ.ಕೆ.ಅಬ್ದುಲ್ ಹಮೀದ್ ಕೆಮ್ಮಾಯಿ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ರಫೀಕ್ ಹಾಜಿ ತಂಬುತ್ತಡ್ಕ, ದಾವೂದ್ ಬಪ್ಪಳಿಗೆ, ಆಸಿಫ್ ಹಾಜಿ ತಂಬುತ್ತಡ್ಕ, ಮುಹಮ್ಮದ್ ಕೂಟೇಲ್, ಇಲ್ಯಾಸ್ ನೆಲ್ಯಾಡಿ, ಉಸ್ಮಾನ್ ಕೂರ್ನಡ್ಕ, ಅಶ್ರಫ್ ಕೆಮ್ಮಿಂಜೆ, ಇಸ್ಮಾಯಿಲ್ ಸಾಲ್ಮರ, ಅಬ್ದುಲ್ ಲತೀಫ್ ದರ್ಬೆ, ಅಬ್ದುಲ್ ಅಝೀಝ್ ಹಾಜಿ ಮೊಟ್ಟೆತ್ತಡ್ಕ, ಅಬ್ದುಲ್ ರಶೀದ್ ಹಾಜಿ ನೈತಾಡಿ, ಅಬ್ದುಲ್ ರಝಾಕ್ ಹಾಜಿ ಕೆದುವಡ್ಕ, ಇಸಾಕ್ ಪಡೀಲ್, ಹಸೈನಾರ್ ದರ್ಬೆ, ಅಬ್ದುಲ್ ಸಲೀಂ ಮಿತ್ತೂರು, ಸಿರಾಜ್ ಕುಕ್ಕರಬೆಟ್ಟು, ಉಸ್ಮಾನ್ ಮುಕ್ವೆ, ಅಬ್ದುಸಮದ್ ಮಾಂತೂರು, ಅಬ್ದುಲ್ ರಹಿಮಾನ್ ಹಾಜಿ ಬೈಪಾಸ್ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಹಿತೈಷಿಗಳಾದ ಎಂಟು ಮಂದಿ ಹಜ್ ಯಾತ್ರಾರ್ಥಿಗಳನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವ್ಯವಸ್ಥಾಪಕ ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಮೊಟ್ಟೆತ್ತಡ್ಕ ಸ್ವಾಗತಿಸಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಝಹ್ರಾನ್ ವಂದಿಸಿದರು.