ಆಲಂಕಾರು: ಆಲಂಕಾರು ಗ್ರಾ.ಪಂ ಸಾಮಾನ್ಯ ಸಭೆಯು ಗ್ರಾ.ಪಂ ಅಧ್ಯಕ್ಷರಾದ ಸುಶೀಲರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.
ಕಳೆದ ಗ್ರಾಮಸಭೆಯಲ್ಲಿ ಶರವೂರು ನಗ್ರಿ ಎಂಬಲ್ಲಿ ಚರಂಡಿ ಸಮಸ್ಯೆಯಿಂದ ರಸ್ತೆ ಹದಗೆಡುತ್ತಿದ್ದು ಈ ಬಗ್ಗೆ ಸಾರ್ವಜನಿಕವಾಗಿ ಆಲಂಕಾರು ಗ್ರಾ.ಪಂ ಗೆ ಸರಿಪಡಿಸಿ ಕೊಡುವಂತೆ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯ ನಡೆಸಿದ್ದರು. ಈ ಬಗ್ಗೆ ಸ್ಥಳಿಯರಿಂದ ಅಕ್ಷೇಪ ಬರುತ್ತಿದ್ದು, ಆಲಂಕಾರು ಗ್ರಾ.ಪಂ ವತಿಯಿಂದ ಚರಂಡಿ ದುರಸ್ತಿ ಮಾಡುವುದಾಗಿ ತೀರ್ಮಾನಿಸಿ ಇದಕ್ಕೆ ಸಂಬಂಧಪಟ್ಟಂತೆ ಶರವೂರು ಅಂಗನವಾಡಿ ಸ್ಥಳಿಯರ ಸಭೆ ಕರೆಯವುದಾಗಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ನೀರು ಬಳಕೆದಾರರ ಸಭೆ:
ಆಲಂಕಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಾ.ಪಂ ವತಿಯಿಂದ ನೀರು ಬಳಕೆ ಮಾಡುತ್ತಿದ್ದವರ ಸಭೆಯನ್ನು ಕರೆದು ಸಮಸ್ಯೆಯನ್ನಾ ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಆಲಂಕಾರು ಗ್ರಾ.ಪಂ ಗೆ ಗಾಂಧಿ ಪುರಸ್ಕಾರ ಬಂದಿದ್ದು ,ಗಾಂಧಿಪುರಸ್ಕಾರದಲ್ಲಿ ಬರುವ 5 ಲಕ್ಷ ಮೊತ್ತಕ್ಕೆ ಕ್ರೀಯಾ ಯೋಜನೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತರವರು ಸರಕಾರದಿಂದ ಬಂದ ಸುತ್ತೋಲೆಯನ್ನು ಸಭೆಗೆ ತಿಳಿಸಿದರು. ಕಾರ್ಯದರ್ಶಿ ವಸಂತ ಶೆಟ್ಟಿ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ರವಿ ಪೂಜಾರಿ ಕೆ, ಪಂಚಾಯತ್ ಸದಸ್ಯರಾದ ಚಂದ್ರಶೇಖರ, ಶ್ವೇತಾ ಕುಮಾರ್, ಕೃಷ್ಣ ಗಾಣಂತಿ, ವಾರಿಜ, ಸುಮತಿ, ಸುನಂದ ಬಾರ್ಕುಳಿ,ಶಾರದ ರವರು ಸಾಮಾನ್ಯ ಸಭೆಯಲ್ಲಿ ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆ ನೀಡಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.