ಉಪ್ಪಿನಂಗಡಿ: ಇಲ್ಲಿನ 34ನೇ ನೆಕ್ಕಿಲಾಡಿ ಶ್ರೀ ರಾಘವೇಂದ್ರ ಮಠದಲ್ಲಿ ವಿಶೇಷ ವಸಂತ ಪೂಜೆ ವಿಜೃಂಭಣೆಯಿಂದ ನಡೆಯಿತು.
ಈ ಸಂಧರ್ಭದಲ್ಲಿ ಮಠದ ಅಧ್ಯಕ್ಷ ಕೆ. ಉದಯ ಕುಮಾರ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ ಹರೀಶ ಉಪಾಧ್ಯಾಯ, ಪ್ರಮುಖರಾದ ಎನ್. ಗೋಪಾಲ ಹೆಗ್ಡೆ, ದಮಯಂತಿ ಆರ್. ಶೆಟ್ಟಿ, ಸದಾನಂದ ನೆಕ್ಕಿಲಾಡಿ, ಶ್ರೀನಿಧಿ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದು, ಮಠದ ಅರ್ಚಕರಾದ ರಾಘವೇಂದ್ರ ಭಟ್ ಹಾಗೂ ಸತ್ಯನಾರಾಯಣ ಬಳ್ಳಕುರಾಯ ಪೂಜಾ ವಿಧಿ- ವಿಧಾನಗಳನ್ನು ನಡೆಸಿಕೊಟ್ಟರು.