ಉಪ್ಪಿನಂಗಡಿ: ಇಲ್ಲಿನ ಫ್ಲೈ ಓವರ್ ಬಳಿಯಿರುವ ಸಿಟಿ ಮಾರ್ಕೆಟ್ ಕಟ್ಟಡದಲ್ಲಿ ಶುದ್ಧ ಸಸ್ಯಹಾರಿ ಕೇಕ್ ಮತ್ತು ಕೆಫೆಯಾದ ‘ಡ್ರೀಮ್ ಹೆವೆನ್’ ಅನ್ನು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕರಾದ ವೇ.ಮೂ. ಹರೀಶ್ ಉಪಾಧ್ಯಾಯ ಅವರು ಮೇ.11ರಂದು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಜ್ಯೋತಿಷ್ಯಾಶ್ರದ ಪ್ರಕಾರ ಇಂದು ಶುಭ ದಿನವಾಗಿದ್ದು, ಇದೇ ಶುಭ ದಿನದಲ್ಲೇ ಉಪ್ಪಿನಂಗಡಿಯಲ್ಲಿ ದಿನಕರ್ ಪ್ರಿಯಾ ಶೆಟ್ಟಿ ಮಾಲಕತ್ವದ ಶುದ್ಧ ಸಸ್ಯಹಾರಿ ಕೇಕ್ ಮತ್ತು ಕೆಫೆ ಆರಂಭಗೊಂಡಿದೆ. ಉತ್ತಮ ಆಹಾರ ನೀಡುವ ಮೂಲಕ ಗ್ರಾಹಕರನ್ನು ತೃಪ್ತಿಪಡಿಸುವ ಇಲ್ಲಿ ಕೆಲಸವಾಗಲಿ. ಈ ಸಂಸ್ಥೆಯು ಈ ಭಾಗದ ಗ್ರಾಹಕರ ಮನೆ-ಮನಗಳನ್ನು ತಟ್ಟಿ ಪ್ರಸಿದ್ಧಿಯನ್ನು ಪಡೆಯಲಿ. ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಮಾತನಾಡಿ, ಈ ಸಂಸ್ಥೆಯು ಉತ್ತಮ ಅಭಿವೃದ್ಧಿ ಹೊಂದಿ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು. ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ ರಿಬ್ಬನ್ ಕತ್ತರಿಸಿ, ಶುಭ ಹಾರೈಸಿದರು.
ಅತಿಥಿಗಳನ್ನು ಶಾಲು ಹೊದೆಸಿ, ಹೂಗುಚ್ಛ ನೀಡಿ ಸ್ವಾಗತಿಸಿ ಮಾತನಾಡಿದ ಸಂಸ್ಥೆಯ ಮಾಲಕರಾದ ದಿನಕರ್ ಹಾಗೂ ಪ್ರಿಯಾ ಶೆಟ್ಟಿ ಅವರು, ಇದು ಶುದ್ಧ ಸಸ್ಯಹಾರಿ ಕೇಕ್ ಮತ್ತು ಕೆಫೆಯಾಗಿದೆ. ಈಗಾಗಲೇ ನಮ್ಮ ಸಂಸ್ಥೆಯೊಂದು ಪುತ್ತೂರಿನಲ್ಲಿದ್ದು, ಇಲ್ಲಿ ಇನ್ನೊಂದು ಸಂಸ್ಥೆ ಇಂದು ಶುಭಾರಂಭಗೊಂಡಿದೆ. ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ಎರಡು ದಿನ(ಮೇ.11 ಮತ್ತು 12) ಗಳ ಆಫರ್ ನೀಡಲಾಗುತ್ತಿದ್ದು, ಅರ್ಧ ಕೆ.ಜಿ.ಯ ಕೇಕ್ ಖರೀದಿಸಿದರೆ 2 bro wnin ಕೇಕ್ ಉಚಿತ, pastry ಕೇಕ್ ಖರೀದಿಸಿದರೆ ಮತ್ತೊಂದು ಉಚಿತ, coco lava ಕೇಕ್ ಖರೀದಿಸಿದರೆ ಮತ್ತೊಂದು ಕೇಕ್ ಉಚಿತವಾಗಿ ಪಡೆಯಬಹುದಾಗಿದೆ. ಅಲ್ಲದೇ, ಈ ಕೆಫೆಯಲ್ಲಿ ಕೇವಲ 10 ನಿಮಿಷದಲ್ಲಿ ಫ್ರೆಶ್ ಕೇಕ್ ತಯಾರಿಸಿಕೊಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಮಾಲೀಕುದ್ದೀನಾರ್ ಜುಮಾ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಶುಕೂರು ಹಾಜಿ ಶುಕ್ರಿಯಾ, ಉದ್ಯಮಿ ಯು.ರಾಮ, ಇಳಂತಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಈಸುಬು ಪೆದಮಲೆ, ಬಾಲಕೃಷ್ಣ ಶೆಟ್ಟಿ ನಾಳ ಹಾಗೂ ಮತ್ತಿತರರು ಉಪಸ್ಥಿತರಿದ್ದರು.