ಕಡಬದಲ್ಲಿ ಶಾಂತಿ ಸುವ್ಯವಸ್ಥೆಗೆ ಪಥಸಂಚಲನ

0

ಕಡಬ: ಇತ್ತೀಚೆಗೆ ಜಿಲ್ಲೆಯ ಕೆಲವೊಂದು ಭಾಗಗಳಲ್ಲಿ ಅಹಿತಕರ ಘಟನೆಗಳು ನಡೆದ ಹಿನ್ನೆಲೆ, ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಡಬ ಪೊಲೀಸ್ ಠಾಣೆ ಭಾನುವಾರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಪಥಸಂಚಲನ ನಡೆಸಿತು.

ಪಥಸಂಚಲನ ಕಡಬ ಮಿನಿ ವಿಧಾನ ಸೌಧದ ಬಳಿಯಿಂದ ಪ್ರಾರಂಭಗೊಂಡು ಕಡಬ ಪೇಟೆಯಲ್ಲಿ ಸಾಗಿತು. ಕಡಬ ಪೊಲೀಸ್ ಠಾಣೆಯ ಸಿಬ್ಬಂದಿಗಳ ಜೊತೆಗೆ ಹಾಸನ ವಿಭಾಗದ ಕರ್ನಾಟಕ ರಾಜ್ಯ ರಕ್ಷಣಾ ಪಡೆ (ಕೆ.ಎಸ್.ಆರ್.ಪಿ.) ಯ ತುಕಡಿಯೂ ಪಾಲ್ಗೊಂಡಿತು.

ಸಾರ್ವಜನಿಕರಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಪಾಲನೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಪಥಸಂಚಲನ ಆಯೋಜಿಸಲಾಯಿತು. ಸಾರ್ವಜನಿಕರು ಶಿಸ್ತುಬದ್ಧ ಪಥಸಂಚಲನವನ್ನು ಗಮನಿಸಿ ಪೊಲೀಸರ ಬದ್ಧತೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್., ಹಾಗೂ ಕಡಬ ಠಾಣೆಯ ಉಪನಿರೀಕ್ಷಕರಾದ ಅಭಿನಂದನ್ ಮತ್ತು ಅಕ್ಷಯ್ ಡವಗಿವರು ಉಪಸ್ಥಿತರಿದ್ದರು. ಎ.ಎಸ್ ಐ, ಸೇರಿದಂತೆ ಎಲ್ಲ ಸಿಬ್ಬಂದಿಗಳು ಕಡಬ ಪಥಸಂಚಲನದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here