ಪುರುಷರಕಟ್ಟೆ:ಗಣೇಶೋತ್ಸವದ ಬೆಳ್ಳಿಹಬ್ಬ ಸಂಭ್ರಮದ ಮನವಿ ಪತ್ರ ಬಿಡುಗಡೆ

0

ಪುತ್ತೂರು:ಪುರುಷರಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಈ ವರ್ಷ ನಡೆಯಲಿರುವ ಬೆಳ್ಳಿಹಬ್ಬ ಸಂಭ್ರಮ ಹಾಗೂ ಮೂಡಪ್ಪ ಸೇವೆಯ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ಮೇ.12ರಂದು ಪುರುಷರಕಟ್ಟೆ ಶ್ರೀಮಹಾಲಿಂಗೇಶ್ವರ ಕಟ್ಟೆಯ ಮುಂಭಾಗದಲ್ಲಿ ನಡೆಯಿತು.


ಆಮಂತ್ರಣ ಪತ್ರ ಬಿಡುಗೊಳಿಸಿದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯ ಮಾತನಾಡಿ, ಬೆಳ್ಳಿ ಹಬ್ಬದ ಸಂಭ್ರಮ ಹಾಗೂ ಮೂಡಪ್ಪ ಸೇವೆಯಲ್ಲಿ ಪ್ರತಿ ಮನೆಯವರು ಭಾಗವಹಿಸಿ ಸಹಕರಿಸುವಂತೆ ವಿನಂತಿಸಿದರು.


ಗಣೇಶೋತ್ಸವ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ ಶ್ರೀನಿವಾಸ್ ರಾವ್ ಮಾತನಾಡಿ, ಜಾತಿ ಬೇಧ ಬಿಟ್ಟು ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಭಾಗವಹಿಸಿ ಬೆಳ್ಳಿ ಹಬ್ಬದ ಸಂಭ್ರಮವನ್ನು ಯಶಸ್ಸಿಗೊಳಿಸುವಂತೆ ವಿನಂತಿಸಿದರು.


ನರಿಮೊಗರು ಗ್ರಾ.ಪಂ ಸದಸ್ಯ ನವೀನ್ ರೈ ಶಿಬರ, ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿ ಮಾಯಂಗಲ, ಪ್ರಧಾನ ಕಾರ್ಯದರ್ಶಿ ಸಂತೋಷ್ ಜೋಗಿ, ಖಜಾಂಚಿ ರಾಘವೇಂದ್ರ ಪ್ರಭು ಚಂದ್ರಮ್‌ಸಾಗ್, ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಉಮೇಶ್ ಪುರುಷ ಇಂದಿರಾನಗರ, ಪ್ರಧಾನ ಕಾರ್ಯದರ್ಶಿ ಶರತ್‌ಚಂದ್ರ ಬೈಪಾಡಿತ್ತಾಯ ಬಜಪ್ಪಳ, ಖಜಾಂಚಿ ವಿಶ್ವನಾಥ ಬಲ್ಯಾಯ, ಗೌರವಾಧ್ಯಕ್ಷರಾದ ವಿಶ್ವನಾಥ ಪುರುಷ ಬಿಂದು, ವಸಂತ ಕಲ್ಲರ್ಪೆ, ಸಮಿತಿ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here