ಮೇ 28-30 ಲೋಕಾರ್ಪಣೆ, ಪ್ರತಿಷ್ಟಾ ಮಹೋತ್ಸವ
ಇಷ್ಟಾರ್ಥ ಸಿದ್ದಿಗಾಗಿ ಈ ಭಜನಾ ಮಂದಿರದಲ್ಲಿ ಹರಕೆಯ ಭಜನೆ ಸೇವೆ ಮಾಡಿಸಿಕೊಂಡರೆ ಸಂಕಷ್ಟಗಳು ಪರಿಹಾರವಾದ ಅದೆಷ್ಟೋ ನಿದರ್ಶನಗಳಿವೆ. ಶ್ರೀ ಸಿದ್ದಿವಿನಾಯಕ ದೇವರು ಕಾರಣಿಕ ಶಕ್ತಿಯಾಗಿ ಇಲ್ಲಿರುವುದರಿಂದ ವಾಸ್ತುಶಿಲ್ಪ ಹೊಂದಿದ ಭಜನಾ ಮಂದಿರದ ಅವಶ್ಯಕತೆಯನ್ನು ಪ್ರಶ್ನಾಚಿಂತನೆ ಮುಖೇನ ಕಂಡುಕೊಂಡು ಜೀರ್ಣೋದ್ಧಾರ ಕಾರ್ಯಕ್ಕೆ ಆರಂಭಿಸಲಾಯಿತು. ಇದೀಗ ಜೀರ್ಣೋದ್ಧಾರ ಕಾರ್ಯಗಳು ಅಂತಿಮಹಂತದಲ್ಲಿದ್ದು, ಮೇ 28 ರಿಂದ ಮೊದಲ್ಗೊಂಡು ನೂತನ ಭಜನಾ ಮಂದಿರದ ಲೋಕಾರ್ಪಣೆ, ಶ್ರೀ ದೇವರ ಛಾಯಾ ಬಿಂಬ ಪ್ರತಿಷ್ಠಾ ಮಹೋತ್ಸವ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರ ಶ್ರೀ ಸಿದ್ದಿವಿನಾಯಕ ಸೇವಾ ಸಂಘ ಹಾಗೂ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಪುನರ್ ನಿರ್ಮಾಣ ಸಮಿತಿ ವತಿಯಿಂದ ಮೇ 28 ರಿಂದ 30 ರವರೆಗೆ ನಡೆಯಲಿರುವ ನೂತನ ಭಜನಾ ಮಂದಿರದ ಲೋಕಾರ್ಪಣೆ ಹಾಗೂ ಶ್ರೀ ದೇವರ ಛಾಯಾಬಿಂಬ ಪ್ರತಿಷ್ಟಾ ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಮೇ.11ರಂದು ನಡೆಯಿತು.
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ವೆಂಕಟರಮಣ ಭಟ್ ಕಾನುಮೂಲೆ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಕಲಿಯುಗದಲ್ಲಿ ದೇವರ ಅನುಗ್ರಹಕ್ಕೆ ಶ್ರೇಷ್ಠವಾದುದು ನಾಮಸಂಕೀರ್ತನೆ. ದೇವರು ಎಲ್ಲಾ ಕಡೆ ಇರುತ್ತಾರೆ. ಆದರೆ ಸಾನ್ನಿಧ್ಯ ಪ್ರತಿಷ್ಟಾಪಿಸಿ ಆರಾಧಿಸಿದಾಗ ಅದಕ್ಕೆ ವಿಶೇಷ ಶಕ್ತಿಯಿರುತ್ತದೆʼ ಎಂದ ಅವರು ಈ ಹಿನ್ನೆಲೆಯಲ್ಲಿ ಭಜನಾ ಮಂದಿರದ ಅವಶ್ಯಕತೆ ಮತ್ತು ಮಹತ್ವವನ್ನು ಹೇಳಿದರು.
ಈ ವೇಳೆ ಭಜನಾ ಮಂದಿರದ ಪುರೋಹಿತರಾದ ವೇ.ಮೂ. ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ, ಮಮತಾ ವಿ. ರೈ ಪೊರ್ದಾಳ್, ಪುನರ್ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ ಕಕ್ಕೂರು, ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಅಧ್ಯಕ್ಷ ಶ್ರೀಕುಮಾರ್ ಭಟ್ ಅಡ್ಯೆತ್ತಿಮಾರ್, ಕಾರ್ಯದರ್ಶಿ ಗಣೇಶ್ ಪಂಬೆಜಾಲು, ಕೋಶಾಧಿಕಾರಿ ಸತ್ಯನಾರಾಯಣ ಮಣಿಯಾಣಿ ತಲೆಪ್ಪಾಡಿ, ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಪುನರ್ ನಿರ್ಮಾಣ ಸಮಿತಿಯ ಕೋಶಾಧಿಕಾರಿ ದಿನೇಶ್ ಗೌಡ ಪಂಬೆಜಾಲು, ಉಪಾಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ, ಜೊತೆ ಕಾರ್ಯದರ್ಶಿ ಯತೀಶ್ ಕುಲಾಲ್ ಕೋರ್ಮಂಡ, ಗೌರವ ಸಲಹೆಗಾರರಾದ ಸನತ್ ಕುಮಾರ್ ರೈ ತೋಟದಮೂಲೆ, ಪುರಂದರ ನಾಯರಡ್ಕ, ಜಯರಾಮ ಗಾಂಭೀರ ಮಡ್ಯಂಪಾಡಿ, ರಾಧಾಕೃಷ್ಣ ಆರ್. ಕೋಡಿ, ಶ್ರೀಪ್ರಸಾದ್ ಅಡ್ಯೆತ್ತಿಮಾರ್, ಗಂಗಾಧರ ಗೌಡ ಪಂಬೆಜಾಲು, ರಾಮಚಂದ್ರ ಗೌಡ ಕಟ್ಟಕೋಡಿ, ವೈದಿಕ ಸಮಿತಿ ಸಂಚಾಲಕ ಅಚ್ಚುತ ಭಟ್ ಕಕ್ಕೂರು, ಹೊರೆಕಾಣಿಕೆ ಸಮಿತಿ ಸಂಚಾಲಕ ಕೃಷ್ಣಪ್ಪ ಕುಲಾಲ್ ಉಡ್ಡಂಗಳ, ನಿಖಿಲ್ ಮಡ್ಯಂಪಾಡಿ, ಪುಷ್ಪರಾಜ್ ವಿನಾಯಕನಗರ, ಈಶ್ವರ ನಾಯ್ಕ್ ಕಕ್ಕೂರು, ಪ್ರಶಾಂತ್ ವಿನಾಯಕನಗರ ಸೇರಿದಂತೆ ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು, ಭಕ್ತಾಭಿಮಾನಿಗಳು ಪಾಲ್ಗೊಂಡರು.
ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಲಿಂಗಪ್ಪ ಗೌಡ ಕಕ್ಕೂರು ವಂದಿಸಿದರು.