ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ, ಬೆಳಿಗ್ಗೆ ಗಣಪತಿ ಹೋಮ, ಚಂಡಿಕಾ ಹೋಮ, ಶತರುದ್ರ, ರಾತ್ರಿ ಬಲಿಹೊರಟು ಉತ್ಸವ, ಬಂಡಿ ಉತ್ಸವ
ಪುತ್ತೂರು ತಾಲೂಕು ಆಡಳಿತ ಸೌಧದ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಅಪರಾಹ್ನ ೧೧.೩೦ಕ್ಕೆ ಉಪ ವಿಭಾಗ ಮಟ್ಟದ ಜಾಗೃತಿ, ಉಸ್ತುವಾರಿ ಸಮಿತಿ ಸಭೆ, ೧೨ಕ್ಕೆ ಸಫಾಯಿ ಕರ್ಮಚಾರಿಗಳ ನಿಷೇಧ, ಪುನರ್ವಸತಿಯ ಉಪವಿಭಾಗ ಮಟ್ಟದ ಸಮಿತಿ ಸಭೆ
ಪುತ್ತೂರು ಮುಳಿಯ ಗೋಲ್ಡ್ & ಡೈಮಂಡ್ಸ್ನ ಅಪರಂಜಿ ರೂಫ್ ಗಾರ್ಡನ್, ೩ನೇ ಮಹಡಿ, ಸುಲೋಚನಾ ಟವರ್ಸ್ನಲ್ಲಿ ಸಂಜೆ ೬.೩೦ರಿಂದ ಶ್ರೀ ದೇವಿಮಹಾತ್ಮೆ-ಬೊಂಬೆಯಾಟ
ಪುತ್ತೂರು ರೋಟರಿ ಕಣ್ಣಿನ ಆಸ್ಪತ್ರೆಯಲ್ಲಿ ಬೆಳಿಗ್ಗೆ ೯ರಿಂದ ಉಚಿತ ನೇತ್ರ ತಪಾಸಣಾ ಶಿಬಿರ
ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳ್ಳಿಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಮಕ್ಕಳ ಕ್ರಿಯಾತ್ಮಕ ಸನಿವಾಸ ಕಲಾ ಸಂಭ್ರಮ-ವರ್ಣ ದರ್ಶಿನಿ
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಂಘದ ಈಶ್ವರಮಂಗಲ ಶಾಖೆಯ ಸಹಕಾರಿ ಸದನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ sಸಂಘದ ಸದಸ್ಯರು, ಗ್ರಾಹಕರ ಸಮಾವೇಶ, ಕೃಷಿ ಮಾಹಿತಿ ಕಾರ್ಯಾಗಾರ
ಸವಣೂರು ಗ್ರಾಮದ ಆರೇಲ್ತಡಿ ಉಳ್ಳಾಕ್ಲು, ಕೆಡೆಂಜೊಡಿತ್ತಾಯ, ಪರಿವಾರ ದೈವಗಳ ದೈವಸ್ಥಾನದಲ್ಲಿ ಬೆಳಿಗ್ಗೆ ಗಣಪತಿ ಹವನ, ಭಗವತಿ ಪೂಜೆ, ಅನುಜ್ಞಾ ಕಲಶ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಅಧಿವಾಸ ಪೂಜೆ, ಗಾನ ನೃತ್ಯ ಸಂಭ್ರಮ, ರಾತ್ರಿ ಸಭಾ ಕಾರ್ಯಕ್ರಮ, ಶಿವಧೂತೆ ಗುಳಿಗೆ ನಾಟಕ
ವಿಟ್ಲ ದಿ ನಾಲೇಡ್ಜ್ ಹಬ್ ಟ್ಯೂಷನ್ ಸೆಂಟರ್ನಲ್ಲಿ ಬೆಳಿಗ್ಗೆ ೯.೩೦ರಿಂದ ಪ್ರಥಮ ವರ್ಷದ ಸಂಭ್ರಮ, ಪಿಯುಸಿ, ಎಸ್ಎಸ್ಎಲ್ಸಿ ಸಾಧಕರಿಗೆ ಸನ್ಮಾನ
ಕೆಯ್ಯೂರು ಗ್ರಾಮ ಮಾಡಾವು ಸಂಪಾಜೆ ಕುಟುಂಬದ ದೈವ ಚಾವಡಿಯಲ್ಲಿ ಬೆಳಿಗ್ಗೆ ೬ರಿಂದ ಉಳ್ಳಾಕುಲು, ಅಬ್ಬೆಜ್ಜಾಲಯ, ಪರಿವಾರ ದೈವಗಳ ನೇಮ, ಅನ್ನಸಂತರ್ಪಣೆ, ರಾತ್ರಿ ೮ರಿಂದ ಆದಿಸ್ಥಾನದಲ್ಲಿ ಧರ್ಮದೈವ ರುದ್ರಚಾಮುಂಡಿ, ಪರಿವಾರ ದೈವಗಳ ಭಂಡಾರ ತೆಗೆಯುವುದು, ೯ರಿಂದ ಜಾವತೆ, ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ, ವರ್ಣರ ಪಂಜುರ್ಲಿ, ಹುಲಿಭೂತ ದೈವಗಳ ನೇಮ