ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಎದುರಿಸಲು ಮೆಸ್ಕಾಂ ಸನ್ನದ್ಧ

0

ತುರ್ತುನಿರ್ವಹಣೆಗೆ 51 ಮಂದಿಯ ಕಾರ್ಯಪಡೆ ಸಿದ್ಧ

ಪುತ್ತೂರು: ಮಳೆಗಾಲದಲ್ಲಿ ಉಂಟಾಗಬಹುದಾದ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲು ಮೆಸ್ಕಾಂ ಸನ್ನದ್ಧವಾಗಿದೆ. ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಮೆಸ್ಕಾಂ ಪುತ್ತೂರು ವಿಭಾಗಕ್ಕೆ 51 ಮಂದಿಯ ಕಾರ್ಯಪಡೆ ಸಿದ್ದವಾಗಿದ್ದು, ಮೇ ತಿಂಗಳ ಪ್ರಾರಂಭದಿಂದಲೇ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ 8 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಲಾಗಿದೆ.


ತುರ್ತು ಕಾರ್ಯಾಚರಣೆಗಾಗಿ ವಿದ್ಯುತ್ ಗುತ್ತಿಗೆದಾರರನ್ನೂ ತೊಡಗಿಸಿಕೊಳ್ಳಲಾಗುವುದು. ಮಳೆ,ಗಾಳಿಯಿಂದ ಹಾನಿಯಾದಲ್ಲಿ ಮರುಸ್ಥಾಪನೆಗೊಳಿಸಲು ಅಗತ್ಯ ಸಾಮಾಗ್ರಿಗಳ ಸಂಗ್ರಹವೂ ಇದೆ. ಸಾರ್ವಜನಿಕರಿಂದ ದೂರುಗಳು ಬಂದಾಗ, ಯಾವುದೇ ಸಂದರ್ಭದಲ್ಲಿಯೂ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮೆಸ್ಕಾಂ ಪುತ್ತೂರು ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ.ಅವರು ತಿಳಿಸಿದ್ದಾರೆ.


ಸಾರ್ವಜನಿಕರೂ ಜಾಗೃತೆ ವಹಿಸಬೇಕು: ಮಳೆಗಾಲ ಬಂತೆಂದರೆ ವಿದ್ಯುತ್ ಅವಘಡಗಳೂ ಹೆಚ್ಚುತ್ತವೆ. ಗಾಳಿ ಮಳೆ, ಸಿಡಿಲು, ಮಿಂಚು ಬಂದಾಗ ವಿದ್ಯುತ್ ಅವಘಡಗಳು ಉಂಟಾಗುತ್ತವೆ.ಈ ಕಾರಣದಿಂದ ಮೆಸ್ಕಾಂ ಮುನ್ನೆಚ್ಚರಿಕೆ ವಹಿಸುವ ಜೊತೆಗೆ, ಸಾರ್ವಜನಿಕರೂ ಜಾಗೃತ ವಹಿಸುವಂತೆ ಮೆಸ್ಕಾಂ ಮನವಿ ಮಾಡಿದೆ.

ಮುಂಗಾರು ಆರಂಭಕ್ಕೆ ದಿನಗಣನೆ ಶುರುವಾಗಿದೆ. ಬೇಸಿಗೆ ಅಥವಾ ಚಳಿಗಾಲದಲ್ಲಿ ಇರುವ ವಿದ್ಯುತ್ ಸರಬರಾಜು ವ್ಯವಸ್ಥೆಗೂ ಮಳೆಗಾಲದ ಸರಬರಾಜು ವ್ಯವಸ್ಥೆಗೂ ವ್ಯತ್ಯಾಸವಿರುತ್ತದೆ. ಮಳೆಗಾಲದಲ್ಲಿ ಸಿಡಿಲು, ಮಳೆ ಬರುವಾಗ ಅಥವಾ ವಿದ್ಯುತ್ ತಂತಿಗಳಲ್ಲಿ ತಾಂತ್ರಿಕ ತೊಂದರೆಗಳು ಉಂಟಾದಾಗ ಸಾರ್ವಜನಿಕರೇ ಅದನ್ನು ಸರಿಪಡಿಸಲು, ಮುಟ್ಟಲು ಹೋಗದಂತೆ ನಾಗರಿಕರಲ್ಲಿ ಮೆಸ್ಕಾಂ ಮನವಿ ಮಾಡಿದೆ.


ಮಳೆಗಾಲದಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಬಳಕೆ ಮಾಡುವಾಗ ಸಾರ್ವಜನಿಕರು ಸ್ವಯಂ ಜಾಗ್ರತೆ ವಹಿಸಬೇಕು.ಮುಂಗಾರು ಅವಧಿಯಲ್ಲಿ ಮಳೆ, ಗಾಳಿ, ಗುಡುಗು, ಮಿಂಚು ಅಧಿಕವಾಗಿ ಬರುವ ಸಾಧ್ಯತೆಗಳಿರುವುದರಿಂದ ಸಾರ್ವಜನಿಕರು ತುಂಡಾಗಿ ಬಿದ್ದಿರುವ ವಿದ್ಯುತ್ ಲೈನ್‌ಗಳನ್ನು ಮುಟ್ಟುವುದು, ವಿದ್ಯುತ್ ಕಂಬ ಹಾಗೂ ಇತರ ವಿದ್ಯುತ್ ಉಪಕರಣಗಳನ್ನು ಮುಟ್ಟುವುದು, ಜಾನುವಾರುಗಳನ್ನು ವಿದ್ಯುತ್ ಕಂಬಕ್ಕೆ ಕಟ್ಟುವುದು, ಬಟ್ಟೆ ಒಣಗಲು ವಿದ್ಯುತ್ ಕಂಪನಿಯ ಸಾಮಾಗ್ರಿಗಳನ್ನು ಬಳಸುವುದಾಗಲಿ ಮಾಡಬಾರದು. ವಿದ್ಯುತ್ ಲೈನ್‌ಗಳಲ್ಲಿ ತೊಂದರೆ ಸಂಭವಿಸಿದ ಸಂದರ್ಭದಲ್ಲಿ ಸಾರ್ವಜನಿಕರು ತಾವೇ ಸರಿಪಡಿಸಲು ಮುಂದಾಗದೆ ಮೆಸ್ಕಾಂಗೆ ಮಾಹಿತಿ ನೀಡುವಂತೆ ಮೆಸ್ಕಾಂ ಸೂಚನೆ ನೀಡಿದೆ.

ಅಪಾಯದಿಂದ ದೂರವಿರಿ: ಮಳೆಗಾಲದಲ್ಲಿ ವಿದ್ಯುತ್ ತಂತಿಗಳ ಬಗ್ಗೆ ಎಚ್ಚರವಿರಬೇಕು.ಜೋರು ಮಳೆಯಾದರೆ ಮನೆಯಿಂದ ಹೊರಡುವಾಗ ವಿದ್ಯುತ್ ಕಂಬಗಳು, ತಂತಿಗಳ ಮೇಲೆ ಗಮನಹರಿಸಬೇಕು.ನಿಮ್ಮ ಪರಿಸರದಲ್ಲಿ ವಿದ್ಯುತ್ ತಂತಿ ಬಿದ್ದಿದ್ದರೆ ತಕ್ಷಣ ಮೆಸ್ಕಾಂಗೆ ಮಾಹಿತಿ ನೀಡಬೇಕು.ವಿದ್ಯುತ್ ತಂತಿಗಳು ಮತ್ತು ಕಂಬಗಳಿಂದಾಗುವ ಅಪಾಯಗಳ ಬಗ್ಗೆ ಮಕ್ಕಳಿಗೆ ತಿಳಿಸಿ.ಮಳೆಗಾಲದಲ್ಲಿ ನಿಮ್ಮ ವಾಹನವನ್ನು ಯಾವುದೇ ವಿದ್ಯುತ್ ತಂತಿ ಅಥವಾ ಕಂಬಗಳ ಬಳಿ ನಿಲ್ಲಿಸಬಾರದು ಹಾಗೂ ಎಚ್ಚರವಾಗಿರಬೇಕು.ಒದ್ದೆಯಾಗಿರುವ ವಿದ್ಯುತ್ ಕಂಬಗಳನ್ನು ಹಾಗೂ ಇತರೆ ವಿದ್ಯುತ್ ಉಪಕರಣಗಳನ್ನು ಮುಟ್ಟಬಾರದು. ಸಿಡಿಲು,ಮಿಂಚು ಇದ್ದ ಸಂದರ್ಭದಲ್ಲಿ ಮೈನ್ ಸ್ವಿಚ್ ಅಥವಾ ಸ್ವಿಚ್ ಬೋರ್ಡ್ ಬಳಿ ನಿಲ್ಲದೇ ಮುಂಜಾಗ್ರತೆ ವಹಿಸಬೇಕು ಎಂದೂ ಮೆಸ್ಕಾಂ ನಾಗರಿಕರಿಗೆ ಮನವಿ ಮಾಡಿದೆ.


ತುರ್ತು ಸಮಯದಲ್ಲಿ ಇವರನ್ನು ಸಂಪರ್ಕಿಸಿ: ಮಳೆಗಾಲದಲ್ಲಿ ತುರ್ತು ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಮತ್ತು ದೂರು ದಾಖಲಿಸಲು ಉಪ ವಿಭಾಗಗಳಲ್ಲಿ 24*7 ಸೇವಾ ಕೇಂದ್ರಗಳಲ್ಲಿ ದೂರು ದಾಖಲಿಸಬಹುದು.

ಪುತ್ತೂರು ನಗರ ಉಪವಿಭಾಗ:
ಪುತ್ತೂರು ಶಾಖಾಧಿಕಾರಿ-1:9448289638, 08251-236393, 231263 ಪುತ್ತೂರು ಶಾಖಾಧಿಕಾರಿ-2: 9448289644, 08251-236493, ಶಾಖಾಧಿಕಾರಿ ಉಪ್ಪಿನಂಗಡಿ 9448289646, 08251-251401, ಶಾಖಾಧಿಕಾರಿ ಬನ್ನೂರು-9480841354, 08251-233393, 24 ತಾಸುಗಳ ಸೇವಾ ಕೇಂದ್ರ 9480833013,ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ 9448289504, 08251-230393 ಸಂಪರ್ಕಿಸಬಹುದು.
ಪುತ್ತೂರು ಗ್ರಾಮಾಂತರ ಉಪವಿಭಾಗ: ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ 9480833065, 08251-234393, ಕುಂಬ್ರ ಶಾಖಾಧಿಕಾರಿ-9448289645, 08251-285683, ಬೆಟ್ಟಂಪಾಡಿ ಶಾಖಾಧಿಕಾರಿ 9448998737, 08251288493, ಈಶ್ವರಮಂಗಲ ಶಾಖಾಧಿಕಾರಿ-9480833074, 08251-289283, ಸವಣೂರು ಶಾಖಾಧಿಕಾರಿ-9448998736, 08251-282063, 24 ತಾಸುಗಳ ಸೇವಾ ಕೇಂದ್ರ 08251-285683,ಸಂಪರ್ಕಿಸಬಹುದು.
ಕಡಬ ಉಪವಿಭಾಗ: ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ 9480833044, 08251260159, ಕಡಬ ಶಾಖಾಧಿಕಾರಿ -9448289647,08251-260158, ಆಲಂಕಾರು ಶಾಖಾಧಿಕಾರಿ-9448998738, 08251-263600, ನೆಲ್ಯಾಡಿ ಶಾಖಾಧಿಕಾರಿ 9448998725, 08251-254493, ಬಿಳಿನೆಲೆ ಶಾಖಾಧಿಕಾರಿ 9480841353, 08251-262353, 24 ತಾಸುಗಳ ಸೇವಾ ಕೇಂದ್ರ 9480841369 ಸಂಪರ್ಕಿಸಬಹುದು ಎಂದು ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಟೋಲ್ ಫ್ರೀ 1912 ಗೆ ಕರೆಮಾಡಿ
ತುರ್ತು ಸಂದರ್ಭದಲ್ಲಿ ಅಥವಾ ವಿದ್ಯುತ್ ಅವಘಡದ ಬಗ್ಗೆ ಮುನ್ಸೂಚನೆ ಕಂಡುಬಂದಲ್ಲಿ ತಕ್ಷಣ 24*7 ಗ್ರಾಹಕ ಸೇವಾ ಕೇಂದ್ರದ ಟೋಲ್ ಫ್ರೀ ಸಂಖ್ಯೆ 1912ಗೆ ದೂರನ್ನು ದಾಖಲಿಸಬಹುದು.‘ನನ್ನ ಮೆಸ್ಕಾಂ’ ಆಪ್ ಮೂಲಕ, ಮೆಸ್ಕಾಂ ಅಫೀಶಿಯಲ್ ಫೇಸ್‌ಬುಕ್ ಪೇಜ್, ವಾಟ್ಸಪ್ ಮೂಲಕವೂ ದೂರು ನೀಡಬಹುದು.ಅಥವಾ ಸಮೀಪದ ಮೆಸ್ಕಾಂ ಕಚೇರಿಯನ್ನು, ಅಧಿಕಾರಿಗಳನ್ನು ಸಂಪರ್ಕಿಸುವಂತೆ ಮೆಸ್ಕಾಂ ತಿಳಿಸಿದೆ.

LEAVE A REPLY

Please enter your comment!
Please enter your name here