ಪುತ್ತೂರು: ಪುತ್ತೂರು ಕೊಂಬೆಟ್ಟಿನಲ್ಲಿರುವ ಶ್ರೀ ಮಹಾಲಿಂಗೇಶ್ವರ ಐಟಿಐಯಲ್ಲಿ ಮೇ.12ರಂದು ಕ್ಯಾಂಪಸ್ ಉದ್ಯೋಗ ಸಂದರ್ಶನ ಸಂಸ್ಥೆಯ ಕೌಶಲ್ಯ ಸಭಾಭವನದಲ್ಲಿ ನಡೆಯಿತು.
ಬೆಂಗಳೂರಿನಲ್ಲಿ ಶಾಖೆಯುಳ್ಳ ಏರೋಸ್ಪೇಸ್ , ಆಟೋಮೋಟಿವ್, ಡಿಫೆನ್ಸ್, ಇಂಡಸ್ಟ್ರಿಯಲ್, ವೈದ್ಯಕೀಯ , ಗ್ರಾಹಕ ಮುಂತಾದ ಕ್ಷೇತ್ರಕ್ಕೆ ಸಂಬಂಧಿಸಿ ಇಂಡೊ ಮೀಮ್ ಪ್ರೈವೇಟ್ ಲಿಮಿಟೆಡ್ ಕಂಪೆನಿಗೆ ಉದ್ಯೋಗ ಸಂದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಐಟಿಐ ಕೊಂಬೆಟ್ಟು ಪುತ್ತೂರು, ಸರ್ಕಾರಿ ಮಹಿಳಾ ಐಟಿಐ ನರಿಮೊಗರು, ಸರ್ಕಾರಿ ಐಟಿಐ ವಿಟ್ಲ, ಸುಪ್ರಜಿತ ಐಟಿಐ ವಿಟ್ಲ ಇವುಗಳಿಂದ ಎಲೆಕ್ಟ್ರಿಷಿಯನ್, ಇಲೆಕ್ಟ್ರಾನಿಕ್ಸ್ ಮೆಕಾನಿಕ್ ವೃತ್ತಿಗಳ 224 ವಿದ್ಯಾರ್ಥಿಗಳು ಭಾಗವಹಿಸಿದ್ದರು.