ಸಾಲ್ಮರ ತಾರಿಗುಡ್ಡೆ ಮನೆಯೊಂದಕ್ಕೆ ಬೆಂಕಿ

0

ಪುತ್ತೂರು: ಸಾಲ್ಮರ ತಾರಿಗುಡ್ಡೆಯಲ್ಲಿ ಸುಲೈಮಾನ್ ಎಂಬವರ ಹಂಚಿನ ಮನೆಗೆ ಬೆಂಕಿ ತಗುಲಿ ಹಾನಿಯುಂಟಾದ ಘಟನೆ ಮೇ.15ರ ನಸುಕಿನ ಜಾವ ನಡೆದ ಬಗ್ಗೆ ವರದಿಯಾಗಿದೆ.


ತಾರಿಗುಡ್ಡೆ ಸುಲೈಮಾನ್‌ರವರ ಹಂಚಿನ ಮನೆಗೆ ನಸುಕಿನ ಜಾವ ಸುಮಾರು 3 ಗಂಟೆಗೆ ಬೆಂಕಿ ತಗುಲಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿರಬಹುದೆಂದು ತಿಳಿದು ಬಂದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದವರು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯಿಂದಾಗಿ ಮರದ ಸಾಮಗ್ರಿಗಳು, ವಿದ್ಯುತ್ ಉಪಕರಣಗಳು, ಪಾತ್ರೆಗಳು, ಅಡುಗೆ ಸಾಮಾನುಗಳು, ಮನೆಯ ಚಾವಣಿ ಭಾಗಶಃ ಹಾನಿಗೊಂಡಿದೆ.

LEAVE A REPLY

Please enter your comment!
Please enter your name here