ಪುತ್ತೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಡಿಪ್ಲೋಮ ಇಂಜಿನಿಯರಿಂಗ್ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ, ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ .ಎ ಅವರನ್ನು ಮೇ.15ರಂದು ಕಡಬ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಇಂದು ಅಭಿನಂದನೆ ಸಲ್ಲಿಸಿದರು.
ಕಡಬ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಪೂವಪ್ಪ ನಾಯ್ಕ ಎಸ್ ಆಲಂಕಾರು, ಪ್ರಧಾನ ಕಾರ್ಯದರ್ಶಿ ಜೋಸ್ ಪ್ರಕಾಶ್ ಕಡಬ, ಉಪಾಧ್ಯಕ್ಷರಾದ ಅನಿಲ್ ಕುಮಾರ್ ನೆಲ್ಯಾಡಿ, ಮಾಜಿ ಅಧ್ಯಕ್ಷರಾದ ಜೋಯ್ ತೋಮಸ್ ನೆಲ್ಯಾಡಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸಜೀವ ಎ ಇಚಿಲಂಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ದಯಾನಂದ ಕೊಂಬಾರು ಉಪಸ್ಥಿತರಿದ್ದರು.
Home ಇತ್ತೀಚಿನ ಸುದ್ದಿಗಳು ಕಡಬ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಕೆಪಿಟಿಸಿಎಲ್ ಡಿಪ್ಲೋಮಾ ಇಂಜಿನಿಯರ್ ಸಂಘದ ಅಧ್ಯಕ್ಷ ರಾಮಚಂದ್ರರಿಗೆ ಅಭಿನಂದನೆ