ಸುಹಾಸ್ ಹತ್ಯೆ ಪ್ರಕರಣ: ಹಿಂದು ಸಮಾಜದ ಕೆಲ ಮುಖಂಡರಿಗೂ ಎನ್‌ಐಎ ತನಿಖೆ ಬೇಡ

0

ಸುಹಾಸ್ ಶೆಟ್ಟಿ ನುಡಿನಮನ ಕಾರ್ಯಕ್ರಮದಲ್ಲಿ ಭರತ್ ಕುಮ್ಡೇಲು ಆರೋಪ

ಪುತ್ತೂರು: ಹಿಂದು ಸಂಘಟನೆಗಳ ಕಾರ್ಯಕರ್ತರಾಗಿದ್ದ ಸುಹಾಸ್ ಶೆಟ್ಟಿಯವರ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸುವಂತೆ ಹಿಂದು ಸಂಘಟನೆಗಳು ಒತ್ತಾಯಿಸಿದರೂ ಹಿಂದು ಸಮಾಜದ ಕೆಲ ಮುಖಂಡರು ಎನ್‌ಐಎ ತನಿಖೆ ಬೇಡ ಎಂಬ ಭಾವನೆಯನ್ನು ತೋರ್ಪಡಿಸುತ್ತಿರುವುದಾಗಿ ಬಜರಂಗದಳ ಪುತ್ತೂರು ಜಿಲ್ಲೆ ಸಂಯೋಜಕ ಭರತ್ ಕುಮ್ಡೇಲು ಅವರು ಆರೋಪಿಸಿದರು.
ಇತ್ತೀಚೆಗೆ ಹತ್ಯೆಗೊಳಗಾದ ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯವರಿಗೆ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದಿಂದ ಪುತ್ತೂರು ಜೈನ ಭವನದಲ್ಲಿ ಮೇ.15ರಂದು ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು. ಸುಹಾಸ್ ಶೆಟ್ಟಿಯವರನ್ನು ಕೊಲೆ ಮಾಡಿದ ದುಷ್ಕರ್ಮಿಗಳು ದೊಡ್ಡ ಸಾಧನೆ ಮಾಡಿಲ್ಲ. ಯಾಕೆಂದರೆ ಆ ಸಮಯದಲ್ಲಿ ಸುಹಾಸ್ ಶೆಟ್ಟಿ ಅವರ ವಾಹನದಲ್ಲಿ ಹತ್ಯಾರು ಇರಲಿಲ್ಲ, ಕೈಯಲ್ಲೂ ಇರಲಿಲ್ಲ. ಈ ಸಂದರ್ಭ ನೋಡಿ ಸುಹಾಸ್ ಹತ್ಯೆ ನಡೆದಿದೆ ಎಂದರು. ನಾವು ಸುಹಾಸ್ ಹತ್ಯೆಯ ತನಿಖೆಯನ್ನು ಎನ್‌ಐಎಗೆ ಕೊಡಬೇಕೆಂದು ಒತ್ತಾಯ ಮಾಡುತ್ತೇವೆ ಎಂದರು.

ಬಂಟ್ವಾಳ ವಿಶ್ವಹಿಂದು ಪರಿಷತ್ ಅಧ್ಯಕ್ಷ ಪ್ರಸಾದ್ ಕುಮಾರ್ ಪ್ರಮುಖ ಭಾಷಣ ಮಾಡಿದರು. ವಿಹಿಂಪ ವಿಭಾಗದ ಪ್ರಚಾರ ಪ್ರಸಾರದ ಪ್ರಮುಖ್ ಪ್ರದೀಪ್, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ನುಡಿನಮನ ಸಲ್ಲಿಸಿದರು. ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಕಾರ್ಯಕರ್ತರು ದೇಶಕ್ಕಾಗಿ ಕೆಲಸ ಮಾಡುವವರು.ದೇಶದ ಒಳಗಿನ ಸೈನಿಕರಾಗಿ ನಮ್ಮ ಸಂಘಟನೆಯ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಆದರೆ ಯಾವುದೇ ಫಲಾಪೇಕ್ಷೆ ಇಲ್ಲದೆ ಹಿಂದುತ್ವಕ್ಕಾಗಿ ಹೋರಾಟ ಮಾಡಿದ ಸುಹಾಸ್ ಶೆಟ್ಟಿ ಅವರು ಮತಾಂಧರಿಂದ ಹತ್ಯೆಗೊಳಗಾಗಿದ್ದಾರೆ. ಅಗಲಿದ ನಮ್ಮ ಕಾರ್ಯಕರ್ತನ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದರು. ಹಿಂದು ಸಂಘಟನೆಯ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here