ಸಕಲೇಶಪುರ – ಸುಬ್ರಹ್ಮಣ್ಯ ರೋಡ್‌ ಸೆಕ್ಷನ್‌ ವಿದ್ಯುದ್ದೀಕರಣ ಕಾಮಗಾರಿ : ಜೂ.1ರಿಂದ ನ.1ರವರೆಗೆ ಮಂಗಳೂರು- ಬೆಂಗಳೂರು ಹಗಲು ರೈಲು ರದ್ದು

0

ಮಂಗಳೂರು: ಸಕಲೇಶಪುರ- ಸುಬ್ರಹ್ಮಣ್ಯ ರೋಡ್‌ ಸೆಕ್ಷನ್‌ ಮಧ್ಯೆ ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಮಂಗಳೂರು- ಬೆಂಗಳೂರು ನಡುವೆ ಜೂ.1 ರಿಂದ ನ.1ರವರೆಗೆ (ಸುಮಾರು 154 ದಿನ) ಹಗಲು ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಮೇ 31ರಿಂದ ನ.1ರ ವರೆಗೆ ಪ್ರತಿ ಶನಿವಾರ ಸಂಚರಿಸುವ ನಂ.16539 ಯಶವಂತ ಪುರ-ಮಂಗಳೂರು ಜಂಕ್ಷನ್‌ ಸಾಪ್ತಾಹಿಕ ಗೋಮಟೇಶ್ವರ ಎಕ್ಸ್‌ಪ್ರೆಸ್‌. ಅದೇ ರೀತಿ, ಜೂ.1ರಿಂದ ನ.2ರ ವರೆಗೆ ರವಿವಾರ ಸಂಚರಿಸುವ ನಂ.16540 ಮಂಗಳೂರು ಜಂಕ್ಷನ್‌ – ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲು ರದ್ದಾಗಲಿದೆ. ಜೂ.1ರಿಂದ ಅ.30ರವರೆಗೆ ಮಂಗಳವಾರ, ಗುರುವಾರ ಮತ್ತು ರವಿವಾರ ಸಂಚರಿಸುವ ನಂ.16575 ಯಶವಂತಪುರ-ಮಂಗಳೂರು ಜಂಕ್ಷನ್‌ ತ್ತೈ-ವೀಕ್ಲಿ ಎಕ್ಸ್‌ಪ್ರೆಸ್‌ ರದ್ದಾಗಲಿದೆ. ಜೂ.2ರಿಂದ ಅ.31ರ ವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ನಂ.16576 ಮಂಗಳೂರು- ಯಶವಂತಪುರ ತ್ತೈ-ವೀಕ್ಲಿ ಎಕ್ಸ್‌ಪ್ರೆಸ್‌ ರದ್ದಾಗಲಿದೆ.

ಜೂ.2 ರಿಂದ ಅ.31ರ ವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ನಂ. 16515 ಯಶವಂತಪುರ-ಕಾರವಾರ ತ್ತೈ-ವೀಕ್ಲಿ ಎಕ್ಸ್‌ಪ್ರೆಸ್‌ ಹಾಗೂ ಜೂ.3 ರಿಂದ ನ.1ರ ವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ಸಂಚರಿಸುವ ನಂ.16516 ಕಾರವಾರ -ಯಶವಂತಪುರ ತ್ತೈ-ವೀಕ್ಲಿ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ರದ್ದುಗೊಳ್ಳಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here