ಅರುಣ ಸಾರಥಿ ಸಂಘಟನೆಯಿಂದ ಧನಸಹಾಯ

0

ಪುತ್ತೂರು: ಗಂಭೀರ ಖಾಯಿಲೆಯಿಂದ ಬಳಲುತ್ತಿರುವ ಕೆಯ್ಯೂರು ನಿವಾಸಿ ಕೃಷ್ಣ ನಾಯ್ಕ ಎಂಬವರಿಗೆ “ಅರುಣ ಸಾರಥಿ” ಸಂಘಟನೆಯ ವತಿಯಿಂದ ‘ಹಿಂದವಿ” ಕಛೇರಿಯಲ್ಲಿ 10,000 ರೂಪಾಯಿ ಧನಸಹಾಯವನ್ನು ಅವರ ಮನೆಯವರಿಗೆ ”ಪುತ್ತಿಲ ಪರಿವಾರ ಸೇವಾ ಟ್ರಸ್ಟ್’ ನ ಸಂಚಾಲಕರಾದ ಅರುಣ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ನೀಡಿದರು.

ಕಳೆದ ಹತ್ತು ತಿಂಗಳಿನಿಂದ ಹತ್ತು ಸಾವಿರ ರೂಪಾಯಿಯಂತೆ ಅನಾರೋಗ್ಯದಲ್ಲಿರುವವರಿಗೆ ಒಟ್ಟು ಒಂದು ಲಕ್ಷ ರೂಪಾಯಿ ಧನಸಹಾಯವನ್ನು ಈ ಸಂಘಟನೆಯ ಮುಖಾಂತರ ನೀಡಲಾಗಿದೆ.

ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀರಾಮ್ ಭಟ್ ಪಾತಾಳ,ಮಹೇಂದ್ರ ವರ್ಮ,ರವಿ ಕುಮಾರ್ ರೈ ಮಠ,ರಾಜು ಶೆಟ್ಟಿ ಕೆಮ್ಮಾಯಿ,ಪ್ರಜ್ವಲ್ ಘಾಟೆ,ಪ್ರೇಮ್ ರಾಜ್ ಆರ್ಲಪದವು,ಸಂದೇಶ್ ನಾಯ್ಕ್ ಕೆಯ್ಯೂರು,ರೂಪೇಶ್ ನಾಯ್ಕ್,ಸಚಿನ್ ವಳತ್ತಡ್ಕ,ಸ್ವಸ್ತಿಕ್ ತಾರಿಗುಡ್ಡೆ,ರವಿ ಪ್ರಸಾದ್ ರೈ ಕಾವು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here