‘ಲೋಕಲ್ ಗಲ್ಫ್ ಯೂತ್’ ಸಮಿತಿ ಅಸ್ತಿತ್ವಕ್ಕೆ
ಪುತ್ತೂರು: ಕಬಕ ಜಮಾತಿಗೊಳಪಟ್ಟ ಅನಿವಾಸಿ ಯುವಕರ ಸೇವಾ ಸಂಘವಾದ ‘ಗಲ್ಫ್ ಯೂತ್ ಕಬಕ ಜಮಾಅತ್ ಇದರ 10 ವರ್ಷಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಹಿಂದೆ ಸಮಿತಿಗೆ ಕಾರ್ಯನಿರ್ವಹಿಸಿ ಅನಿವಾಸಿ ಜೀವನಕ್ಕೆ ನಿವೃತ್ತಿ ಹೊಂದಿದವರ ಜೊತೆ ಈ ವರ್ಷ ಊರಿನ ಹೊಸ ‘ಲೋಕಲ್ ಗಲ್ಫ್ ಯೂತ್’ ಎಂಬ ಹೊಸ ಸಂಸ್ಥೆ ಹುಟ್ಟುಹಾಕಲು ನಿರ್ಧರಿಸಿ ಸಮಿತಿಯಲ್ಲಿ ಸ್ಥಾನಮಾನ ವನ್ನು ಹಂಚಿಕೊಳ್ಳಲಾಯಿತು.
ಗಲ್ಫ್ ಯೂತ್ಸ್ ಕಬಕ ಜಮಾಅತ್ 2025-26ನೇ ಸಾಲಿನ ಅಧ್ಯಕ್ಷರಾಗಿ ಶರೀಫ್ ಅಹ್ಮದ್ ಕತಾರ್, ಉಪಾಧ್ಯಕ್ಷರಾಗಿ ಮಹಮ್ಮದ್ ಶಾಕಿರ್ ಯುಎಇ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಝೀರ್ ದಿಲ್ ಕೆಎಸ್‌ಎ ಅವರನ್ನು ಆಯ್ಕೆ ಮಾಡಲಾಯಿತು.
ಜೊತೆ ಕಾರ್ಯದರ್ಶಿಗಳಾಗಿ ಹಮೀದ್ ಬಗ್ಗುಮೂಲೆ ಕೆಎಸ್‌ಎ(ಗಲ್ಫ್) ಹಾಗೂ ಕಲಂದರ್ ಯೂಸುಫ್(ಲೋಕಲ್), ಕೋಶಾಧಿಕಾರಿಯಾಗಿ ಅಬೂಬಕ್ಕರ್ ಅಡ್ಯಾಲ್ ಒಮಾನ್, ಜೊತೆ ಕೋಶಾಧಿಕಾರಿಯಾಗಿ ಕಲಂದರ್ ಶಂಶೀರ್ ಯುಎಇ(ಗಲ್ಫ್) ಹಾಗೂ ರಫೀಕ್ ಕಸ್ತೂರಿ(ಲೋಕಲ್), ಸ್ಥಳೀಯ ಸಂಯೋಜಕರಾಗಿ ಅಬ್ದುಲ್ ಖಾದರ್ ಭಾರತ್, ಲೆಕ್ಕಪತ್ರ ಪರಿಶೋಧಕರಾಗಿ ಮೊಹಮ್ಮದ್ ಆಶಿಕ್ ಕತಾರ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಮಹಮ್ಮದ್ ಕುಂಬ್ರ ಯುಎಇ(ಗಲ್ಫ್) ಮತ್ತು ಮಹಮ್ಮದ್ ಬೊಳ್ವಾರ್ (ಲೋಕಲ್) ಆಯ್ಕೆಯಾದರು. ಸಂಚಾಲಕರಾಗಿ ರವೂಫ್ ಮಾಸ್ಟರ್ ಯುಎಇ (ಗಲ್ಫ್), ಅಮ್ಜದ್ ಖಾನ್ ಪೋಳ್ಯ ಕೆಎಸ್‌ಎ(ಗಲ್ಫ್), ಇಸ್ಮಾಯಿಲ್ ಬಗ್ಗುಮೂಲೆ (ಲೋಕಲ್) ಅವರನ್ನು ಆಯ್ಕೆ ಮಾಡಲಾಯಿತು. ಮುಖ್ಯ ಮಾರ್ಗದರ್ಶಕರಾಗಿ ಅಬ್ದುಲ್ ಬಶೀರ್ ಅಬೂಬಕ್ಕರ್ ಅವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಸುಲೈಮಾನ್ ಕಬಕಾಕರ್ಸ್(ಗಲ್ಫ್) ಹಾಗೂ ಇಸ್ಮಾಯಿಲ್ ಬ್ರೈಟ್(ಲೋಕಲ್), ಮುಖ್ಯ ಸಲಹೆಗಾರರಾಗಿ ಕಬಕ ಅನ್ವರ್ ಖಾಲಿದ್(ಲೋಕಲ್), ಪೋಳ್ಯ ರಫೀಕ್ ಅಹ್ಮದ್(ಲೋಕಲ್), ಆಸಿಫ್ ಬಗ್ಗುಮೂಲೆ(ಗಲ್ಫ್), ಇಕ್ಬಾಲ್ ಬಾಕೇಲ್ ಶೇಕ್(ಗಲ್ಫ್), ಅಶ್ರಫ್ ನೌಷಾದ್ ಪೋಳ್ಯ(ಗಲ್ಫ್) ಹಸನ್ ಧಾರಿಮಿ ಕಬಕ ಅಬಿಧಾಬಿ ಪ್ರಾರ್ಥನೆ ನೆರವೇರಿಸಿದರು. ನಿರ್ಗಮನ ಅಧ್ಯಕ್ಷ ನೌಶಾದ್ ಕೆ.ಪಿ ಪೋಳ್ಯ ಸ್ವಾಗತಿಸಿದರು. ಸಮಿತಿಯ ಲೆಕ್ಕ ಪರಿಶೋಧಕ ಆಶಿಕ್ ಕತಾರ್ ಲೆಕ್ಕಾಚಾರದ ವಿವರಣೆ ನೀಡಿದರು. ರವೂಫ್ ಮಾಸ್ಟರ್ ವಿದ್ಯಾಪುರ ಯುಎಇ ಕಾರ್ಯಕ್ರಮ ನಿರೂಪಿಸಿದರು.