ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಸಮಿತಿ ಸದಸ್ಯೆಯಿಂದ ಪಲ್ಲಕ್ಕಿ ಸೇವೆ

0

ಮಹಾಲಿಂಗೇಶ್ವರನ ಸ್ಮರಣೆ ಮಾಡಿದರೆ ಕಷ್ಟಗಳೆಲ್ಲ ಪರಿಹಾರ – ಪ್ರವೀಣಾ ರೈ ಮರುವಂಜ

ಪುತ್ತೂರು: ನಾಡಿನ ಪ್ರಸಿದ್ಧ ದೇವಾಲಾಯಗಳಲ್ಲಿ ಒಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಪ್ರವೀಣಾ ರೈ ಮರುವಂಜ ಮತ್ತು ಪ್ರಶಾಂತ್ ರೈ ದಂಪತಿಯಿಂದ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ.19ರಂದು ಪಲ್ಲಕ್ಕಿ ಸೇವೆ ನಡೆಯಿತು.


ದೇವಸ್ಥಾನದಲ್ಲಿ ಸೋಮವಾರದ ದಿನ 5 ಪಲ್ಲಕ್ಕಿ ಸೇವೆ ನಡೆದಿದ್ದು, ಪ್ರವೀಣಾ ರೈ ದಂಪತಿಯವರದ್ದೂ ಒಂದಾಗಿತ್ತು. ಈ ಸಂದರ್ಭ ಮಾದ್ಯಮದ ಜೊತೆ ಪ್ರವೀಣಾ ರೈ ಅವರು ಮಾತನಾಡಿ, ನಾವು 8ನೇ ವರ್ಷದ ಪಲ್ಲಕ್ಕಿ ಸೇವೆ ಮಾಡಿಸುತ್ತಿದ್ದೇವೆ. ನಮಗೆ ಕಷ್ಟಕಾಲದಲ್ಲಿ ಪರಿಹಾರ ನೀಡಿದ ದೇವರು ಮಹಾಲಿಂಗೇಶ್ವರ ದೇವರು. ನಮಗೆ ಯಾವ ಕಷ್ಟ ಬಂದರೂ ಮಹಾಲಿಂಗೇಶ್ವರ ದೇವರನ್ನು ಕರೆದಾಗ ಅವರಿಂದ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರ ಪಟ್ಟಿಯಲ್ಲಿ ಆಯ್ಕೆಯಾದ ವಿಚಾರ ವೈರಲ್ ಆದಾಗಲೂ ಅದೆ ದಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಪ್ರಾರ್ಥನೆ ಮಾಡಿದ್ದೇನೆ. ಆ ಪ್ರಾರ್ಥನೆಯಿಂದ ತೊಂದರೆಗಳು ನಿವಾರಣೆ ಆಗಿದೆ ಎಂದು ತಿಳಿಸಿದರು.


ಪುತ್ತೂರು ದೇವಳದಲ್ಲಿ ಉತ್ತಮ ವ್ಯವಸ್ಥೆ
ಕೃಷಿಕ ಪ್ರಶಾಂತ್ ರೈ ಅವರು ಮಾತನಾಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಲ್ಲಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ನೇತೃತ್ವದಲ್ಲಿ ಸಮಿತಿ ಸದಸ್ಯರು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಈ ಭಾಗದ ಶಾಸಕ ಅಶೋಕ್ ಕುಮಾರ್ ರೈ ಅವರು ಚಿನ್ನದ ತೆನೆಯಾಗಿ ಸಹಕಾರ ನೀಡುತ್ತಿದ್ದಾರೆ. ದೇವಳದ ಅಭಿವೃದ್ದಿಯಲ್ಲಿ ದೇವರ ಅನುಗ್ರಹ ಇದೆ ಎಂದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ಕೃಷ್ಣವೇಣಿ, ನಳಿನಿ ಪಿ ಶೆಟ್ಟಿ, ಸುಭಾಶ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ಹಿರಿಯರಾದ ಕಿಟ್ಟಣ್ಣ ಗೌಡ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here