ಪುತ್ತೂರು: ಭಾರತೀಯ ಸೈನಿಕರು ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ್ದು, ಸೈನಿಕರು ತೋರಿದ ಅಪ್ರತಿಮ ಸಾಹಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುವ ಸಲುವಾಗಿ ಇಂದು(ಮೇ.20) ಮಂಗಳೂರಿನಲ್ಲಿ ʼಸಿಂಧೂರ ವಿಜಯೋತ್ಸವʼ ಕಾರ್ಯಕ್ರಮ ನಡೆಯಿತು.

ಮಂಗಳೂರಿನ ಪಿವಿಎಸ್ ವೃತ್ತದಿಂದ ಕರಾವಳಿ ಉತ್ಸವ ಮೈದಾನದವರೆಗೆ ದೇಶಾಭಿಮಾನಿಗಳ ದಂಡು ತಿರಂಗ ಧ್ವಜವನ್ನು, ಉದ್ಘೋಷ ಬರಹಗಳನ್ನು ಹಿಡಿದು, ಜೈಕಾರದೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಈ ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆ ಜನರು ಪಾಲ್ಗೊಂಡಿದ್ದರು. ಪುತ್ತೂರಿನಿಂದಲೂ ಸಾವಿರಾರು ಮಂದಿ ಭಾಗಿಯಾದರು.