ಹಿರೇಬಂಡಾಡಿ: ಹಿರೇಬಂಡಾಡಿ ಗ್ರಾಮದ ನೆಹರೂತೋಟ ನಿವಾಸಿ, ರಿಕ್ಷಾ ಚಾಲಕ ಗಂಗಾಧರ (55ವ.)ರವರು ಅಲ್ಪಕಾಲದ ಅಸೌಖ್ಯದಿಂದ ಮೇ 20ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ಗಂಗಾಧರ ಅವರು ಉಪ್ಪಿನಂಗಡಿಯಲ್ಲಿ ರಿಕ್ಷಾ ಬಾಡಿಗೆಗೆ ಓಡಾಟ ನಡೆಸುತ್ತಿದ್ದರು. ಮೃತರು ಪತ್ನಿ ಮಮತಾ, ಪುತ್ರರಾದ ಕಾರ್ತಿಕ್, ದೀಕ್ಷಿತ್ರನ್ನು ಅಗಲಿದ್ದಾರೆ.