ಬೊಳುವಾರು ರಸ್ತೆ ಮಧ್ಯೆ ಮರಣ ಗುಂಡಿ…! ನಗರಸಭೆಯಿಂದ ತಾತ್ಕಾಲಿಕ ಮುನ್ನೆಚ್ಚರಿಕಾ ವ್ಯವಸ್ಥೆ – ಸುದ್ದಿ ವರದಿಗೆ ಸ್ಪಂದನೆ

0

ಪುತ್ತೂರು: ಪುತ್ತೂರು ಮುಖ್ಯರಸ್ತೆ ಬೊಳೂವಾರಿನಲ್ಲಿ ರಸ್ತೆ ಮಧ್ಯೆ ಮುಕ್ತಿ ಸಿಗದ ಮರಣಗುಂಡಿಗೆ ನಗರಸಭೆಯಿಂದ ತಾತ್ಕಾಲಿಕ ಮುನ್ನೆಚ್ಚರಿಕಾ ವ್ಯವಸ್ಥೆ ಮಾಡಲಾಗಿದೆ ಬೊಳುವಾರಿನಲ್ಲಿ ರಸ್ತೆ ಅಗಲೀಕರಣಗೊಳಿಸಿ ಹೊಸ ಡಾಮರೀಕರಣ ನಡೆದಿದೆಯಾದರೂ ಮೋರಿಯೊಂದು ಮುಕ್ತಿ ಸಿಗದೆ ವಾಹನ ಸವಾರರಿಗೆ ಮರಣದ ಗುಂಡಿಯಾಗಿ ಎದುರು ನೋಡುತ್ತಿದೆ ಎಂಬ ವರದಿ ಮೇ.22 ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವರದಿಯಗಿತ್ತು. ಇದಕ್ಕೆ ನಗರಸಭೆ ತಕ್ಷಣ ಸ್ಪಂದಿಸಿದೆ.


ಬೊಳುವಾರಿನಲ್ಲಿ ರಸ್ತೆ ಅಗಲೀಕರಣಕ್ಕೆ ಸ್ಥಳೀಯ ಸಾರ್ವಜನಿಕರು ಸ್ಥಳ ಬಿಟ್ಟು ಕೊಟ್ಟ ಹಿನ್ನಲೆಯಲ್ಲಿ ರಸ್ತೆಯೆನೋ ಅಗಲೀಕರಣ ಆಗಿದೆ. ಜೊತೆಗೆ ಇತ್ತೀಚೆಗೆ ನಗರೋತ್ಥಾನದಲ್ಲಿ ಡಾಮರೀಕರಣವೂ ಆರಂಭಗೊಂಡಿದೆ. ನಡುವೆ ಮಳೆ ಬಂದ ಪರಿಣಾಮ ಪೂರ್ಣಗೊಂಡಿಲ್ಲವಾದರೂ ರಸ್ತೆ ಮಧ್ಯೆ ಬಾಯ್ದೆರೆದು ನಿಂತಿರುವ ಮೋರಿಯೊಂದು ಇನ್ನೂ ಮುಕ್ತಿ ಸಿಗದೆ ವಾಹನ ಸವಾರರಿಗೆ ಮರಣದ ಗುಂಡಿಯಾಗಿ ಎದುರು ನೋಡುತ್ತಿದೆ.

ಕಾಮಗಾರಿ ಪೂರ್ಣಗೊಂಡಿಲ್ಲವಾದರೂ ಸದ್ಯ ಮುನ್ನೆಚ್ಚರಿಕೆಯಾಗಿ ಬ್ಯಾರಿಕೇಡ್ ಅಥವಾ ಸೂಚನಾ ಫಲಕ, ರಿಪ್ಲೆಕ್ಟರ್ ಅಳವಡಿಸಿದರೆ ಮುಂದೆ ಆಗುವ ದುರಂತ ತಪ್ಪಿಸಬಹುದು ಎಂದು ಸಾರ್ವಜನಿಕರು ಆಗ್ರಹಿಸುತ್ತಿರುವುದನ್ನು ವರದಿ ಮಾಡಲಾಗಿತ್ತು. ಈ ಕುರಿತು ಸ್ಪಂದಿಸಿದ ನಗರಸಭೆ ಮೇ.22ರಂದು ಬೆಳಗ್ಗೆ ಗುಂಡಿಯ ಮುಂದೆ ತಾತ್ಕಾಲಿಕ ಬ್ಯಾರಿಕೇಡ್ ಅಳವಡಿಸಿದೆ.

LEAVE A REPLY

Please enter your comment!
Please enter your name here