ಪುತ್ತೂರು: ಟಿಟಿ – ಕಾರೊಂದರ ನಡುವೆ ಅಪಘಾತ ನಡೆದ ಘಟನೆ ಪುತ್ತೂರು ಬೈಪಾಸ್ ರಸ್ತೆ ಬೊಳುವಾರು ಸಮೀಪ ಮೇ.20ರ ರಾತ್ರಿ ನಡೆದಿದ್ದು ಕಾರು ಮತ್ತು ಟಿಟಿಯಲ್ಲಿದ್ದ ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಮಂಗಳೂರಿನಿಂದ ಮೈಸೂರುಗೆ ಸಂಚರಿಸುತ್ತಿದ್ದ ಟಿಟಿ ಹಾಗೂ ಮಂಗಳೂರಿನ ಕಡೆ ಸಂಚರಿಸುತ್ತಿದ್ದ ಬಲೆನೋ ಕಾರಿನ ನಡುವೆ ಅಪಘಾತ ಸಂಭವಿಸಿದೆ.ಎರಡೂ ವಾಹನದಲ್ಲಿದ್ದ ಕೆಲವರು ಗಾಯಗೊಂಡಿದ್ದಾರೆ.ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನಾ ಸ್ಥಳಕ್ಕೆ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ತೆರೆಳಿ ಮಾಹಿತಿ ಪಡೆದು ಕೊಂಡಿದ್ದಾರೆ.