ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಅರಿವು ಕೇಂದ್ರ ಮತ್ತು ವಿದತ್ ಅಕಾಡೆಮಿಯ ಸಹಯೋಗದಲ್ಲಿ ನಡೆಯುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ಮೇ.19ರಂದು ಉದ್ಘಾಟನೆಗೊಂಡಿತು.
ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ.ಎಚ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಆರ್ಯಾಪು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಾಗೇಶ.ಎಂ ಮಾತನಾಡಿ ಮಕ್ಕಳು ಪುಸ್ತಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಆಸಕ್ತಿ ತೋರಿಸಬೇಕೆಂದು ಹೇಳಿದರು. ಸಂಪನ್ಮೂಲ ವ್ಯಕ್ತಿ ವಿದತ್ ಸಂಸ್ಥಾಪಕ ಶ್ರೀವತ್ಸ್.ಬಿ.ಎಸ್ ಮಾತನಾಡಿ, ಆಧುನಿಕ ತಂತ್ರಜ್ಞಾನದೊಂದಿಗೆ ಶೈಕ್ಷಣಿಕವಾಗಿ ಮುನ್ನಡೆಯುವ ಬಗ್ಗೆ ತಿಳಿಸಿದರು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ.ಕೆ, ಗ್ರಂಥಾಲಯದ ಮೇಲ್ವಿಚಾರಕ ನವೀನ್. ಕುಮಾರ್. ಎಂ, ಎಂ.ಬಿ.ಕೆ ವನಜ, ಪಶುಸಕಿ ದೀಪಿಕಾ, ಪಂಚಾಯತ್ ಸಿಬ್ಬಂದಿಗಳು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಅವನಿ ಪ್ರಾರ್ಥಿಸಿದರು. ವಿದತ್ ಸಹ ಸಂಸ್ಥಾಪಕಿ ಶುಭಲಕ್ಷ್ಮೀ ಸ್ವಾಗತಿಸಿ, ಉಪನ್ಯಾಸಕಿ ಧನ್ಯಶ್ರೀ ವಂದಿಸಿದರು. ಉಪನ್ಯಾಸಕಿ ಕುಮಾರಿ ಗುಣಶ್ರೀ ಕಾರ್ಯಕ್ರಮ ನಿರೂಪಿಸಿದರು.