ರಾಘವೇಂದ್ರ ಸ್ಟೋರ್‌ನಲ್ಲಿ ಏಷಿಯನ್ ಪೈಂಟ್ಸ್‌ನ ‘ಬ್ಯೂಟಿಫುಲ್ ಹೋಮ್ ಸರ್ವಿಸ್ ಸೌಲಭ್ಯ’ ಪ್ರಾರಂಭ

0

ಪುತ್ತೂರು: ಪೈಂಟ್‌ಗಳ ಸೇವೆಯಲ್ಲಿ ಕಳೆದ 35 ವರ್ಷಗಳಿಂದ ಮನೆ ಮಾತಾಗಿರುವ ಏಳ್ಮುಡಿಯಲ್ಲಿರುವ ಶ್ರೀ ರಾಘವೇಂದ್ರ ಸ್ಟೋರ್‌ನಲ್ಲಿ ಏಷಿಯನ್ ಪೈಂಟ್ಸ್ ಕಂಪೆನಿಯವರ ಬ್ಯೂಟಿಫುಲ್ ಹೋಮ್ ಪೈಂಟಿಂಗ್ ಸರ್ವಿಸ್ ಎಂಬ ವಿನೂತನ ವ್ಯವಸ್ಥೆಯು ಮೇ.22ರಂದು ಪ್ರಾರಂಭಗೊಂಡಿತು.


ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ ಮಾತನಾಡಿ, ಬದಲಾದ ಕಾಲ ಘಟ್ಟದಲ್ಲಿ ಜನರ ಬಳಿಗೆ ಸೇವೆಯನ್ನು ಜನರ ಬಳಿಗೆ ವಿಸ್ತರಿಸಬೇಕಾಗಿರುವುದೇ ಇಂದಿನ ಮಾರುಕಟ್ಟೆಯ ತಂತ್ರವಾಗಿದೆ. ಯಾವುದೇ ಸಾಮಾಗ್ರಿಗಳು ಮನೆ ಬಾಗಿಲಿಗೆ ಬರಬೇಕು ಎಂಬುದು ಗ್ರಾಹಕರ ಇಚ್ಚೆಯಾಗಿದೆ. ರಾಘವೇಂದ್ರ ಸ್ಟೋರ‍್ಸ್ ಮೂಲಕ ಮನೆಯ ಪೈಂಟಿಂಗ್ ಸೇವೆಯನ್ನು ಗ್ರಾಹಕರ ಮನೆ ಬಾಗಿಲಿಗೆ ವಿತರಿಸಲಾಗುತ್ತಿದೆ. ಈ ವ್ಯವಸ್ಥೆಯಿಂದ ಮನೆಯವರ ಶ್ರಮ ಹಾಗೂ ಗ್ರಾಹಕರ ಒತ್ತಡ ಕಡಿಮೆ ಮಾಡುವಂತ ಹೊಸ ಹೆಜ್ಜೆಯಿಟ್ಟಿದ್ದು ಇಂದಿನ ಕಾಲಕ್ಕೆ ಜನರಿಗೆ ಆವಶ್ಯಕತೆಯಿದೆ ಎಂದರು.


ಏಷಿಯನ್ ಪೈಂಟ್ಸ್‌ನ ಏರಿಯಾ ಮ್ಯಾನೇಜರ್ ಸುಹೈಲ್ ಮಾತನಾಡಿ, ಬ್ಯೂಟಿಫುಲ್ ಹೋಮ್ ಪೈಂಟಿಂಗ್ ಎನ್ನುವುದು ಏಷಿಯನ್ ಪೈಂಟ್ಸ್‌ನ ಅಧಿಕೃತ ಸೇವೆಯಾಗಿದೆ. ಪುತ್ತೂರಿನ ಗ್ರಾಹಕರಿಗೆ ರಾಘವೇಂದ್ರ ಸ್ಟೋರ‍್ಸ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಈ ಸೇವೆ ಪ್ರಾರಂಭಿಸಿದ್ದು ಗ್ರಾಹಕರಿಗೆ ಉತ್ತಮ ಸೇವೆ ದೊರೆಯಲಿದೆ. ಇದು ಪುತ್ತೂರು ಹಾಗೂ ಸುತ್ತು ಮುತ್ತಲಿನ ಜನರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಉತ್ತಮ ಗುಣಮಟ್ಟದ ಪೈಂಟ್ ಉತ್ಪನ್ನಗಳನ್ನು ಕಂಪೆನಿಯ ನಿಯಮದಂತೆ ಸರಿಯಾದ ರೀತಿಯಲ್ಲಿ ಉಪಯೋಗಿಸಿದಾಗ ಮಾತ್ರ ಅತ್ಯುತ್ತಮ ಫಿನಿಶ್ ಹಾಗೂ ದೀರ್ಘ ಬಾಳಿಕೆ ಪಡೆಯಬಹುದು ಎಂದರು.


ದೇವ ಟ್ರೇಡರ‍್ಸ್‌ನ ಮ್ಹಾಲಕ ರವೀಂದ್ರನ್ ಮಾತನಾಡಿ, ಏಷಿಯನ್ ಪೈಂಟ್ಸ್ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿರುವ ರಾಘವೇಂದ್ರ ಸ್ಟೋರ‍್ಸ್‌ನಲ್ಲಿ ಹೊಸ ಹೋಮ್ ಪೈಂಟಿಂಗ್ ಸರ್ವಿಸ್ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಅದು ಹೆಸರಿನಲ್ಲಿಯೇ ಆಕರ್ಷಣೆಯಿದ್ದು ಪುತ್ತೂರಿನ ಜನತೆ ಅನುಕೂಲವಾಗಲಿದೆ ಎಂದರು.


ಕಟ್ಟಡದ ಮಾಲಕರು, ಹಿಮಾ ರೆಫ್ರಿಜರೇಶನ್ ಸಂಸ್ಥೆಯ ಮ್ಹಾಲಕ ಯ.ಪಿ.ರಾಜೇಶ್ ಮಾತನಾಡಿ, ಪೈಂಟ್ ಬಗ್ಗೆ ಅಪಾರ ಅನುಭವ ಹೊಂದಿರುವ ಶ್ರೀ ರಾಘವೇಂದ್ರ ಸ್ಟೋರ್ಸ್ ಸಂಸ್ಥೆಯು ಗ್ರಾಹಕರ ಅಭಿರುಚಿಗೆ ತಕ್ಕಂತೆ ಲಕ್ಸುರಿ, ಪ್ರೀಮಿಯಂ ಹಾಗೂ ಇಕೋನಮಿ ರೇಂಜ್‌ನ ಉತ್ಪನ್ನಗಳನ್ನು ವಿತರಿಸುತ್ತಾ ಜನರ ಮೆಚ್ಚಿಗೆಗೆ ಪಾತ್ರವಾಗಿದೆ. ಈ ಭಾಗದ ಜನರ ಬಹಳ ಸಮಯದ ಬೇಡಿಕೆಯಾಗಿರುವ ಹೋಮ್ ಪೈಂಟಿಂಗ್ ಸರ್ವಿಸ್ ವವಸ್ಥೆಯು ಇಲ್ಲಿ ಪ್ರಾರಂಭವಾಗುತ್ತಿರುವುದು ಬಹಳ ಸಂತಸದ ವಿಚಾರ ಎಂದರು.


ಸಂಸ್ಥೆಯ ಮ್ಹಾಲಕ ಸತ್ಯಶಂಕರ ಭಟ್ ಮಾತನಾಡಿ, ಕಳೆದ 35 ವರ್ಷಗಳಿಂದ ಸೇವೆ ನೀಡುತ್ತಿರುವ ರಾಘವೇಂದ್ರ ಸ್ಟೋರ‍್ಸ್ ಕೇವಲ ವ್ಯಾಪಾರ ಸಂಸ್ಥೆಯಾಗಿರದೆ ಜನರಿಗೆ ಅತ್ಯುತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ವ್ಯಾಪಾರ ಧರ್ಮದಲ್ಲಿ ಪ್ರಾಮಾಣಿಕ ಸೇವೆ ನೀಡುತ್ತಾ ಸಂಸ್ಥೆ ಮುನ್ನಡೆಯುತ್ತಿದೆ. ಗ್ರಾಹಕರ ಸಹಕಾರ, ಸಲಹೆಯಂತೆ ಸೇವೆ ನೀಡುತ್ತಾ ಬಂದಿದ್ದು ಪೈಂಟಿಂಗ್‌ನಲ್ಲಿ ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯಾಗಿದೆ. ಇದಕ್ಕೆ ಕಂಪನಿ ಹಾಗೂ ಗ್ರಾಹರಕ ಸಹಕಾರ ದೊರೆತಿದೆ ಎಂದು ಹೇಳಿದರು.
ಏಷಿಯನ್ ಪೈಂಟ್ಸ್‌ನ ಸೀನಿಯರ್ ಸೇಲ್ಸ್ ಆಫೀಸರ್ ಮುಸ್ತಾಫ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಪೈಂಟಿಂಗ್ ಗುತ್ತಿಗೆದಾರ ಮಿಥುನ್ ವಂದಿಸಿದರು.


ಗ್ರಾಹಕರಿಗೆ ಗುಣಮಟ್ಟದ ಪೈಂಟ್‌ಗಳನ್ನು ನೀಡುತ್ತಿರುವ ನಮ್ಮ ಸಂಸ್ಥೆಯಲ್ಲಿ ಬ್ಯೂಟಿಫುಲ್ ಹೋಮ್ ಪೈಂಟಿಂಗ್ ಸರ್ವಿಸ್‌ನ್ನು ಹೊಸದಾಗಿ ಪ್ರಾರಂಭಿಸಲಾಗಿದೆ. ಇದು ಏಷಿಯನ್ ಪೈಂಟ್ಸ್‌ನ ಹೊಸ ಉತ್ಪನ್ನ. ಮನೆಗೆ ಮಾಡಿಸುವ ಸಂದರ್ಭದಲ್ಲಿ ಗ್ರಾಹಕರ ಮನೆಗೆ ಕಂಪನಿಯ ತಜ್ಞರು ಹಾಗೂ ಕಲರ್ ಕನ್ಸಲ್ಟೆಂಟ್, ತರಬೇತಿ ಪಡೆದ ಪೈಂಟಿಂಗ್ ಗುತ್ತಿಗೆದಾರರು ಭೇಟಿ ನೀಡಿ ಅಲ್ಲಿನ ಆವಶ್ಯಕತೆಯನ್ನು ಪರಿಶೀಲನೆ ನಡೆಸಿ, ಗ್ರಾಹಕರ ಇಚ್ಚೆಯಂತೆ ಪೈಂಟಿಂಗ್ ಕೆಲಸ ಪ್ರಾರಂಭಿಸಲಾಗುವುದು. ಉತ್ತಮ, ಪ್ರಾಮಾಣಿಕತೆ ಸೇವೆಯೊಂದಿಗೆ ಆಧುನಿಕ ಮೆಶಿನ್‌ಗಳನ್ನು ಉಪಯೋಗಿಸಿ ಕ್ಲಪ್ತ ಸಮಯಕ್ಕೆ ಪೈಂಟಿಂಗ್ ಕೆಲಸ ಪೂರ್ಣಗೊಳಿಸಲಾಗುವುದು. ಮನೆಗೆ ಪೈಂಟ್ ಮಾಡಿಸಬೇಕೆಂದು ಯೋಚಿಸಿದಾಗ ನಿಮಗೆ ನಮ್ಮ ಹೊಸ ವ್ಯವಸ್ಥೆಯಲ್ಲಿ ಆರ್ಡರ್ ಮಾಡಿ ನಿಶ್ಚಿಂತೆಯಿಂದ ಇರಬಹುದು. ನಿರ್ದಿಷ್ಟ ದಿನಗಳಲ್ಲಿ ಅತ್ಯುತ್ತಮ ನೋಟ ಹೊಂದಿದ ಮನೆ ನಿಮ್ಮ ಮುಂದೆ ಇರಲಿದೆ.
-ಸತ್ಯಶಂಕರ ಭಟ್, ಮ್ಹಾಲಕರು, ಶ್ರೀ ರಾಘವೇಂದ್ರ ಸ್ಟೋರ‍್ಸ್ ಪುತ್ತೂರು

LEAVE A REPLY

Please enter your comment!
Please enter your name here