ಪುತ್ತೂರು: ಅರ್ಬಿ ಕುಂತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ “ಶಿವಂ” ಸಭಾಂಗಣದ ಉದ್ಘಾಟನೆ ಪ್ರಯುಕ್ತ ಸಾಮೂಹಿಕ ಕುಂಕುಮಾರ್ಚನೆ ಹಾಗೂ ಲಲಿತ ಸಹಸ್ರನಾಮ ಪಾರಾಯಣವನ್ನು ದೇವಾಲಯ ಸಂವರ್ಧನ ಸಮಿತಿ ಶ್ರೀ ಪಾರ್ವತಿ ಬಳಗದಿಂದ ನೆರವೇರಿಸಲಾಯಿತು. 25 ಮಂದಿ ಮಹಿಳೆಯರು ಕಾರ್ಯದಲ್ಲಿ ಪಾಲ್ಗೊಂಡರು.
ಕೃಷ್ಣ ವೇಣಿ ಪ್ರಸಾದ್ ಮುಳಿಯ ಅವರು ದೇವಿಅಪರಾಧ ಕ್ಷಮಾಪಣ ಸ್ತೋತ್ರವನ್ನು ಹೇಳಿಕೊಡುವುದರೊಂದಿಗೆ, ಅರ್ಚನೆಯ ವಿಶೇಷತೆಯನ್ನು ತಿಳಿಸಿದರು. ಮಾಯಾ ಅತ್ರಿಜಾಲು ಹಾಗೂ ಅಲ್ಲಿನ ಅರ್ಬಿ ಶ್ರೀ ಮಹಾಲಿಗೇಶ್ವರ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷರು ಕೃಷ್ಣಕುಮಾರ ಅತ್ರಿಜಾಲು ಮತ್ತು ಕಾರ್ಯದರ್ಶಿ ಪ್ರವಿಣ್ ಆಳ್ವ ಹಾಗೂ ಸದಸ್ಯರು ಉಪಸ್ಥಿತರಿದ್ದು, ಕಾರ್ಯಕ್ರಮದ ವ್ಯವಸ್ಥೆಗೆ ಸಹಕರಿಸಿದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಯವರು ಉಪಸ್ಥಿತರಿದ್ದರು.