ಪುತ್ತೂರು: ಪೂತ್ತೂರಿನಿಂದ ಕಾಣಿಯೂರು ಕಡೆಗೆ ಹೋಗುತ್ತಿದ್ದ ಮಾರುತಿ ಎರ್ಟಿಗಾ ಕಾರೊಂದು ಗಡಿಪಿಲ ಕರೆಮನೆಕಟ್ಟೆ ಸಮೀಪ ಅಪಘಾತಕ್ಕೀಡಾಗಿರುವ ಘಟನೆ ಮೇ 24ರಂದು ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ತೋಟಕ್ಕೆ ಬಿದ್ದಿದೆ. ಚಾಲಕ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಕೊಡಲು ಹೋಗಿ ಕಾರನ್ನು ರಸ್ತೆಯ ಅಂಚಿಗೆ ತೆಗೆದುಕೊಂಡು ಹೋಗಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾರಿಗೂ ಗಾಯ ಆಗಿಲ್ಲ ಎಂದು ತಿಳಿದು ಬಂದಿದೆ.