ವಿವೇಕಾನಂದ ಸೆಂಟ್ರಲ್ ಸ್ಕೂಲಿನಲ್ಲಿ ಶಿಕ್ಷಕರಿಗೆ ‘ಸಂವಿತ್ ‘ ಪಠ್ಯ ಪುಸ್ತಕದ ಬಗ್ಗೆ ಮಾಹಿತಿ ಕಾರ್ಯಗಾರ

0

ಪುತ್ತೂರು: ನೆಹರು ನಗರದಲ್ಲಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲಿನಲ್ಲಿ ಮೇ 23 ಮತ್ತು 24ರಂದು ಶಿಕ್ಷಕರಿಗೆ ‘ಸಂವಿತ್’ ಪಠ್ಯ ಪುಸ್ತಕದ ಬಗ್ಗೆ ಸೂಕ್ತ ತರಬೇತಿಯನ್ನು ನೀಡಲಾಯಿತು.

ಶಾಲಾ ಅಭಿವೃದ್ಧಿಯ ಪಥದಲ್ಲಿ ಉತ್ತಮ ಸಾಧನೆಗಾಗಿ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದೊಂದಿಗೆ ಮಾಡಿಕೊಂಡ ಒಪ್ಪಂದದ ಆಧಾರದಲ್ಲಿ, ಸಂವಿತ್ ಎಂಬ ರಾಷ್ಟ್ರೋತ್ಥಾನದ ಪಠ್ಯಪುಸ್ತಕವನ್ನು ಈ ಶೈಕ್ಷಣಿಕ ವರ್ಷದಿಂದ ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಮೌಲ್ಯಯುತ ಶಿಕ್ಷಣವನ್ನು ಕೊಡುವ ಸದುದ್ದೇಶದಿಂದ ಪಠ್ಯಪುಸ್ತಕ ಸಮಿತಿಯು ಶಿಕ್ಷಕರಿಗೆ, ಭಾಷಾ ಅಭಿವೃದ್ಧಿ, ಗಣಿತ, ವಿಜ್ಞಾನ ಹಾಗೂ ಮೌಲ್ಯಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ನೀಡುವ ನಿಟ್ಟಿನಲ್ಲಿ ನಡೆದಂತಹ ಈ ಶೈಕ್ಷಣಿಕ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಗಿರೀಶ್ ಜೆ. ನಾಯರ್( ಹಿರಿಯ ಶೈಕ್ಷಣಿಕ ವ್ಯವಸ್ಥಾಪಕರು ಸಂವಿತ್ ಫೌಂಡೇಶನ್), ಶ್ಯಾಮಲಾ ಕಾಮತ್( ಕಾರ್ಯಕ್ರಮ ನಿರ್ವಾಹಕರು ), ರೇಖಾ ಹೃಷಿಕೇಶ್ ( ಫ್ರೀಲೆನ್ಸ್ ತರಬೇತಿದಾರರು ) ಹಾಗೂ ಅಮೃತ ಶ್ರೀನಿವಾಸ್ ( ಆಂಗ್ಲ ಭಾಷಾ ತಜ್ಞೆ ) ಮುಂತಾದವರು ಭಾಗವಹಿಸಿ, ಸಂವಿತ್ ಫೌಂಡೇಶನ್ ವತಿಯಿಂದ ಉಪಯುಕ್ತ ಮಾರ್ಗದರ್ಶನ ನೀಡಿದರು .

ಶಾಲಾ ಆಡಳಿತ ಮಂಡಳಿ ಸದಸ್ಯೆಯಾದ ಶಂಕರಿ ಶರ್ಮ ಮತ್ತು ಪ್ರಾಂಶುಪಾಲರಾದ ಸಿಂಧು ವಿ.ಜಿ. ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಅಕ್ಷತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here