ನೆಲ್ಯಾಡಿ-ರಾಮನಗರದಲ್ಲಿ ಉಚಿತ ಪುಸ್ತಕ ವಿತರಣೆ

0

ನೆಲ್ಯಾಡಿ: ಗ್ರಾಮದ ರಾಮನಗರ ಅಮೆತ್ತಿಮಾರು ಗುತ್ತು ಮನೆಯಲ್ಲಿ ದಾನಿಗಳ ಸಹಕಾರದೊಂದಿಗೆ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಒಂದನೇ ತರಗತಿಯಿಂದ ಪದವಿವರೆಗಿನ 100 ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಮಾಜಿಕ ಮುಖಂಡ, ದಾನಿಯೂ ಆದ ಶ್ರೀಕರ ರೈ ಅಗರಿರವರು ಮಾತನಾಡಿ, ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉತ್ತೇಜನ ನೀಡುವ ಸಲುವಾಗಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ನಾವೆಲ್ಲ ಒಂದು ಎನ್ನುವ ಭಾವನೆಯಿಂದ ಯಾವುದೇ ಜಾತಿ ಮತ್ತು ಧರ್ಮವನ್ನು ಮೀರಿ ಎಲ್ಲರನ್ನು ಒಟ್ಟು ಸೇರಿಸಿ ಎಲ್ಲಾ ಮಕ್ಕಳಿಗೂ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು. ಈ ಕಾರ್ಯಕ್ರಮದ ದಾನಿಗಳು ಮತ್ತು ಧಾರ್ಮಿಕ ಮುಖಂಡರಾದ ರಮೇಶ ಗೌಡ ನಾಲ್ಗುತ್ತು ಶುಭಹಾರೈಸಿದರು.

5ನೇ ವರ್ಷದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದ ವ್ಯವಸ್ಥಾಪಕರೂ, ಸಂಘಟಕರೂ ಆದ ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಅಮೆತ್ತಿ ಮಾರುಗುತ್ತು ಗಂಗಾಧರ ಶೆಟ್ಟಿರವರು ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ನಮ್ಮ ಊರಿನ ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ರೂಪದಲ್ಲಿ ಕಳೆದ ಐದು ವರ್ಷಗಳಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದೇವೆ. ಪುಸ್ತಕ ವಿತರಣೆ ಮಾಡುವಾಗ ಮಕ್ಕಳ ಮುಖದಲ್ಲಿ ಕಾಣುವ ನಿಷ್ಕಳಂಕ ಸಂತೋಷ ನಮಗೆ ಈ ಕಾರ್ಯದಲ್ಲಿ ಸಂತೋಷವನ್ನು ತಂದಿದೆ. ವಿದ್ಯೆಯ ಬಗ್ಗೆ ಜಾಗೃತಿ ಮತ್ತು ಅರಿವು ಮತ್ತು ಸಂಸ್ಕಾರ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇದನ್ನು ಪ್ರತಿ ವರ್ಷ ನಡೆಸುವಲ್ಲಿ ನಮಗೆ ಕೈಜೋಡಿಸಿದ ಎಲ್ಲಾ ಗಣ್ಯರಿಗೂ ಮತ್ತು ನಮ್ಮ ಮೇಲೆ ನಂಬಿಕೆಯನ್ನು ಇಟ್ಟು ಪುಸ್ತಕವನ್ನು ಪಡೆದುಕೊಂಡ ಪ್ರೀತಿಯ ವಿದ್ಯಾರ್ಥಿಗಳಿಗೂ ಮತ್ತು ಪೋಷಕರಿಗೂ ವಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ದಾನಿಗಳಾಗಿ ನೆಲ್ಯಾಡಿ ಬಾಲಾಜಿ ಮೆಡಿಕಲ್ಸ್‌ನ ಮಾಲಕರಾದ ಉದಯ್ ಕುಮಾರ್ ಭಟ್, ನೆಲ್ಯಾಡಿ ಸಿಎ ಬ್ಯಾಂಕ್‌ನ ಉದ್ಯೋಗಿ ಮಹೇಶ್ ಗೌಡ ಮುದಲೆಗುತ್ತು, ಕಡಬ ಮಾರ್ದಾಳದ ಶ್ರೀಕರ ರೈ ಅಗರಿ, ರಮೇಶ್ ಗೌಡ ನಾಲ್ಗುತ್ತು, ಗಂಗಾಧರ ಶೆಟ್ಟಿ ಅಮೆತ್ತಿಮಾರುಗುತ್ತುರವರು ಸಹಕರಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.

LEAVE A REPLY

Please enter your comment!
Please enter your name here