ಪುತ್ತೂರು: 2024-25ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಅಧೀನದಲ್ಲಿರುವ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಆಸಿಯಾ ಶಹಮಾರವರು 622 ಅಂಕ ಗಳಿಸಿ ರಾಜ್ಯದಲ್ಲಿ 4ನೇ ರ್‍ಯಾಂಕ್ ಹಾಗೂ ತಾಲೂಕಿನಲ್ಲಿ 3ನೇ ಸ್ಥಾನ ಪಡೆದಿದ್ದಾರೆ.
ಸೈಂಟ್ ಮೇರೀಸ್ ಶಾಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಓರ್ವ ವಿದ್ಯಾರ್ಥಿನಿ ಸಾಧನೆ ಮಾಡಿದವರಾಗಿದ್ದಾರೆ. ಅಸಿಯಾ ಶಹಮಾರವರು ಇಂಗ್ಲಿಷ್ ನಲ್ಲಿ 124 ಅಂಕ, ಕನ್ನಡ 100, ಹಿಂದಿ 100, ಗಣಿತ 99, ವಿಜಯ 99, ಸಮಾಜ 100 ಅಂಕಗಳನ್ನು ಗಳಿಸಿರುತ್ತಾರೆ. ಇವರು ಕಡಬ ತಾಲೂಕಿನ ಕೊಯಿಲ ನಿವಾಸ್ ಮಹಮ್ಮದ್ ಹುಸೇನ್ ಸಿರಾಜ್ ಹಾಗೂ ಸಫ್ರತ್ ಬಾನು ದಂಪತಿ ಪುತ್ರಿ. ಅಸಿಯಾ ಶಹಮಾರವರ ಸಾಧನೆಗೆ ಶಾಲಾ ಸಂಚಾಲಕ ವಂ|ಜೆರಾಲ್ಡ್ ಡಿ’ಸೋಜ, ಶಾಲಾ ಮುಖ್ಯ ಶಿಕ್ಷಕಿ ಮೀರಾ ರೊಡ್ರಿಗಸ್, ಶಾಲಾ ಶಿಕ್ಷಕ ವೃಂದ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.