ಗೆಜ್ಜೆಗಿರಿಯಲ್ಲಿ ಮಾಯಾ ಜುಮಾದಿ ಯಕ್ಷಗಾನದ ಟೈಟಲ್ ಬಿಡುಗಡೆ

0

ಬಡಗನ್ನೂರು :  ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ  ಮಾಯಾ ಜುಮಾದಿ ಪ್ರಸಂಗದ ಟೈಟಲ್ ಬಿಡುಗಡೆ ಕಾರ್ಯಕ್ರಮ ಮೇ.25ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.

 ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ, ಅಧ್ಯಕ್ಷ  ರವಿ ಪೂಜಾರಿ ಚಿಲುಂಬಿ, ಗೌರವಾಧ್ಯಕ್ಷ ಜಯಂತ್ ನಡುಬೈಲ್ ರವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು. 

ʼಇದೊಂದು ಬಾಲೆಮಾಣಿ ಮಾಯಂದಾಲ್ ಪಾರ್ದನ ಆಧಾರಿತ ಸತ್ಯ ಕಥೆ 2025- -26 ನೇ ಸಾಲಿನ ತಿರುಗಾಟದಲ್ಲಿ ಸಂಚಲನ ಮೂಡಿಸಲಿದೆ ಎಂದು ಕ್ಷೇತ್ರದ ಯಕ್ಷಗಾನ ಮೇಳದ ಪ್ರಧಾನ ಸಂಚಾಲಕ ಪ್ರಶಾಂತ್ ಪೂಜಾರಿ ಮಸ್ಕತ್ ರವರು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ  ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ಕೋಶಾಧಿಕಾರಿ ಮೋಹನ್ ದಾಸ್ ವಾಮಂಜೂರ್, ಜೊತೆ ಕಾರ್ಯದರ್ಶಿ  ಜೈ ವಿಕ್ರಂ ಕಲ್ಲಾಪು,  ಸುಜಿತ ವಿ ಬಂಗೇರ, ಪ್ರಮಲ್ ಕುಮಾರ್ ಕಾರ್ಕಳ, ಸಂಜೀವ ಪೂಜಾರಿ ಬಿರುವ ಸೆಂಟರ್, ನವೀನ್ ಸುವರ್ಣ ಸಜೀಪ, ಡಾ ಸಂತೋಷ್ ಪರಂಪಲ್ಲಿ ಉಡುಪಿ,  ಹರೀಶ್ ಕೆ ಪೂಜಾರಿ ಶ್ರೀ ನಾರಾಯಣ ಮಚ್ಚಿನ, ಕಾನೂನು ಸಲಹೆಗಾರ ನವನೀತ್ ಡಿ ಹಿಂಗಾಣಿ, ಹರೀಶ್ ವಿ ಪಚನಾಡಿ,  ನಿತ್ಯಾನಂದ ನಾವರ,  ಜಯರಾಮ ಬಂಗೇರ,  ನಾಗೇಶ್ ಪೂಜಾರಿ, ಶ್ರೀಮತಿ ಶಾಂಭವಿ ಬಂಗೇರ,  ದೀಪಕ್ ಸಜೀಪ, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಬಳಿಕ 2024-2025 ರ ಕೊನೆಯ ತಿರುಗಾಟದ ದೇವರ ಸೇವೆ ಆಟ ಗಿರಿಜಾ ಕಲ್ಯಾಣ ಯಕ್ಷಗಾನ ಪ್ರಸಂಗ ನಡೆಯಿತು.

LEAVE A REPLY

Please enter your comment!
Please enter your name here