ಕಾಣಿಯೂರು: ಬೆಳಂದೂರು ಗ್ರಾಮದ ಮಾದೋಡಿ ಆದಿಮನೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ಅವರ ತಾಯಿ ಲಕ್ಷ್ಮಿ ಕರಿಯಪ್ಪ ರೈ ಅವರ 90ನೇ ವರ್ಷದ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರು ಸ್ವಾಗತಿಸಿದರು.
ಪುತ್ರರಾದ ಭಾಸ್ಕರ ರೈ ನಂಜೆ , ರವೀಂದ್ರ ರೈ ನಂಜೆ, ಉದಯ ರೈ ಮಾದೋಡಿ, ಸೊಸೆಯರಾದ ಮೀರಾ ಭಾಸ್ಕರ ರೈ, ವೃಂದಾ ಜೆ ರೈ, ರಾಜಲಕ್ಷ್ಮಿ ರವೀಂದ್ರ ರೈ, ರಜನಿ ಉದಯ ರೈ, ಅಳಿಯ ಸಂತೋಷ್ ಶೆಟ್ಟಿ , ಪುತ್ರಿಯರಾದ ಶಶಿಕಲಾ ಎಸ್ ಶೆಟ್ಟಿ , ಸುಗುಣ ಸಂತೋಷ್ ಶೆಟ್ಟಿ, ಮೊಮ್ಮಕ್ಕಳು ಮತ್ತು ಮರಿ ಮಕ್ಕಳು, ಬಂಧು ಮಿತ್ರರು, ಊರ ಗಣ್ಯರು, ಹಿತೈಷಿಗಳು, ಕುಟುಂಬಸ್ಥರು ಅವರಿಂದ ಆಶೀರ್ವಾದ ಪಡೆದು, ಅವರಿಗೆ ಶುಭಾಶಯವನ್ನು ಕೋರಿದರು.