ಪುತ್ತೂರು: ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ ಮತ್ತು ಸದಸ್ಯರಾಗಿದ್ದ ಮಹಮ್ಮದ್ ಗಟ್ಟಮನೆಯವರು ಇತ್ತೀಚಿಗೆ ನಿಧನ ಹೊಂದಿದ್ದು ಇವರಿಗೆ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆಯು ಮೇ.27ರಂದು ಕುಂಬ್ರ ಅಕ್ಷಯ ಆರ್ಕೇಡ್‌ನ ನೆಲಮಹಡಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್‌ರವರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೊದಲಿಗೆ ಇಬ್ಬರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ರವರು ಮಾತನಾಡಿ, ಮಾಧವ ರೈಯವರು ಓರ್ವ ಸಂಘ ಜೀವಿಯಾಗಿದ್ದು ಜಾತಿ, ಮತ ಬೇಧವಿಲ್ಲದೆ ಎಲ್ಲರೊಂದಿಗೆ ಬೆರೆಯುತ್ತಿದ್ದ ವ್ಯಕ್ತಿಯಾಗಿದ್ದರು, ಹಾಗೇ ಗಟ್ಟಮನೆ ಮಹಮ್ಮದ್‌ರವರು ಕೂಡ ಉತ್ತಮ ವ್ಯಕ್ತಿತ್ವ ಹೊಂದಿದವರು ಆಗಿದ್ದರು. ಇವರಿಬ್ಬರ ನಿಧನ ಸಂಘಕ್ಕೆ ಅಪಾರ ನಷ್ಟವನ್ನು ತಂದಿದೆ. ಇವರಿಬ್ಬರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹೇಳಿ ನುಡಿ ನಮನ ಸಲ್ಲಿಸಿದರು.
ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ ಮಾತನಾಡಿ, ನಗುಮೊಗದಿಂದಲೇ ಎಲ್ಲರೊಂದಿಗೆ ಬೆರೆಯುತ್ತಿದ್ದ ಮಾಧವ ರೈಯವರು ಸಂಘದ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮಪಟ್ಟಿದ್ದಾರೆ. ಅವರ ಅಕಾಲಿಕ ಅಗಲಿಕೆ ಬಹಳಷ್ಟು ನೋವು ತಂದಿದೆ. ಅದೇ ರೀತಿ ಮಹಮ್ಮದ್ ಗಟ್ಟಮನೆ ಅವರೂ ಕೂಡ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಇವರಿಬ್ಬರ ಆತ್ಮಕ್ಕೂ ಭಗವಂತ ಶಾಂತಿ ಕರುಣಿಸಲಿ ಎಂದು ಹೇಳಿ ನುಡಿ ನಮನ ಸಲ್ಲಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಪಿ.ಕೆ ಮಹಮ್ಮದ್ ಕೂಡುರಸ್ತೆಯವರು ಅಗಲಿದ ಈರ್ವರು ವರ್ತಕರ ಗುಣಗಾನ ಮಾಡಿ, ಸಂಘಕ್ಕೆ ಅವರ ಸೇವೆಯನ್ನು ನೆನೆಯುತ ಅಗಲಿದ ಅತ್ಮಕ್ಕೆ ಶಾಂತಿ ಸಿಗಲೆಂದು ಕೇಳಿಕೊಂಡರು.
ಸಂಘದ ಮಾಜಿ ಅಧ್ಯಕ್ಷ ಮೆಲ್ವಿನ್ ಮಾಂತೆರೋ ಸ್ವಾಗತಿಸಿ, ಕಾರ್ಯದರ್ಶಿ ಭವ್ಯ ರೈ ವಂದಿಸಿದರು. ಸಂಶುದ್ದೀನ್ ಎ. ಆರ್ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಪೂಜಾರಿ ಕುರಿಕ್ಕಾರ, ದಿವಾಕರ ಶೆಟ್ಟಿ, ಚರಿತ್ ಕುಮಾರ್, ರೇಶ್ಮಾ ಮೆಲ್ವಿನ್, ಪ್ರದೀಪ್ ಶಾಂತಿವನ, ಸತೀಶ್ ನೂಜಿ, ಬಾಲಕೃಷ್ಣ ಪಾಟಾಳಿ, ಸಂಪತ್ ಕುಮಾರ್, ಮಾಧವ ರೈಯವರ ಸಹೋದರಿ ರೇವತಿ ಹಾಗೂ ಮನೆಯವರು, ಮಹಮದ್ ರವರ ಪುತ್ರ ಮುಹಾಝ್ ಸಹಿತ ಹಲವರು ಉಪಸ್ಥಿತರಿದ್ದರು.